ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾದ ಸೌಮ್ಯಾಳ ಅಮ್ಮ
ತಿರುವನಂತಪುರಂ, ಸೆಪ್ಟಂಬರ್ 20: ಸೌಮ್ಯಾಳ ಅಮ್ಮ ಮತ್ತು ಸಹೋದರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿದ್ದಾರೆಂದು ವರದಿಯಾಗಿದೆ. ಸೌಮ್ಯಾಕೊಲೆಪ್ರಕರಣದಲ್ಲಿ ಆರೋಪಿ ಗೋವಿಂದಚಾಮಿಗೆ ಸುಪ್ರೀಂಕೋರ್ಟಿನ ತೀರ್ಪು ಅನುಕೂಲಕರವಾಗಿ ಬಂದ ಹಿನ್ನೆಲೆಯಲ್ಲಿ ಸೌಮ್ಯಾಳ ಅಮ್ಮ ಸುಮತಿ ಮತ್ತುಸಹೋದರಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ. ಪ್ರಕರಣದ ನಿರ್ವಹಣೆಯಲ್ಲಿ ಲೋಪವುಂಟಾಗಿದೆ ಎಂದು ಮುಖ್ಯಮಂತ್ರಿಯೊಂದಿಗೆ ಸೌಮ್ಯಾಳ ಅಮ್ಮ ದೂರಿದ್ದಾರೆ.
ಸೌಮ್ಯಾ ಕೊಲೆ ಪ್ರಕರಣದಲ್ಲಿ ಮುಂದಿನ ಕ್ರಮ ಜರಗಿಸಬೇಕು ಎಂಬ ಬಗ್ಗೆ ಇಂದು ಸೇರುವ ಸಚಿವಸಂಪುಟದ ಸಭೆಯಲ್ಲಿ ತೀರ್ಮಾನವಾಗಲಿದೆ.ಪ್ರಕರಣದ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಈ ಹಿಂದೆ ತೀರ್ಮಾನವಾಗಿತ್ತು. ಮುಂದಿನ ಗುರವಾರ ಸುಪ್ರೀಂಕೋರ್ಟಿನಲಿ ಅರ್ಜಿಸಲ್ಲಿಸಲು ತೀರ್ಮಾನವಾಗಿದೆ. ಆದರೆ ಮರುಪರಿಶೀಲನಾ ಅರ್ಜಿಯಲ್ಲಿ ಲೋಪಗಳು ಸಂಭವಿಸದಿರಲು ಯಾವೆಲ್ಲ ಕ್ರಮಗಳನ್ನು ಸ್ವೀಕರಿಸಬೇಕೆಂಬ ವಿಷಯ ಮಂತ್ರಿಮಂಡಲದಲ್ಲಿ ಚರ್ಚೆಯಾಗಲಿದೆ. ಕೇಸು ನಿರ್ವಹಣೆಯಲ್ಲಿ ಪ್ರಾಸಿಕ್ಯೂಶನ್‌ನಿಂದ ಲೋಪವಾಗಿದೆ ಎಂದು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿವೆ.ಈ ಹಿನ್ನೆಲೆಯಲ್ಲಿ ಮರುಪರಿಶೀಲನಾ ಅರ್ಜಿಯಲ್ಲಿ ಲೋಪಗಳಾಗದಂತೆ ಜಾಗ್ರತೆ ವಹಿಸಲು ಸರಕಾರ ನಿರ್ಧರಿಸಿದೆ.
ಮುಖ್ಯಮಂತ್ರಿಯನ್ನು ಭೇಟಿಯಾಗಿ ಮರಳುವ ವೇಳೆ ಸೌಮ್ಯಾಳ ಅಮ್ಮ ಸಂಪೂರ್ಣ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆಂದು ಮಾಧ್ಯಮ ವರದಿಗಳು ಬಹಿರಂಗೊಳಿಸಿವೆ.