×
Ad

ಪ್ರೆಸ್ಟೀಜ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಓಝೋನ್ ದಿನಾಚರಣೆ

Update: 2016-09-20 16:57 IST

ಮಂಗಳೂರು, ಸೆ.20: ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಅಂತಾರಾಷ್ಟೀಯ ಓಝೋನ್ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ವಿಜಯಮ್ಮ ರವಿ ಮಾತನಾಡಿ, ಮುಂದಿನ ಪೀಳಿಗೆ ಪರಿಸರ ಸಂರಕ್ಷಣೆಯ ಜೊತೆಗೆ ಓಝೋನ್ ಪದರದ ರಕ್ಷಣೆಗೆ ಯಾವ ರೀತಿಯಲ್ಲಿ  ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಅಧ್ಯಕ್ಷೆ ರೇಶ್ಮಾ ಹೈದರ್ ವಹಿಸಿದ್ದರು. ಪ್ರಾಂಶುಪಾಲೆ ಫಿರೋಝಾ ಫಯಾಝ್ ಮತ್ತು ಸಾರ್ವಜನಿಕ ಸಂಪನ್ಮೂಲ ಅಧಿಕಾರಿ ದೀಪಾಲಿ ಶೆಣೈ ಉಪಸ್ಥಿತರಿದ್ದರು.

ದ್ಯಾರ್ಥಿಗಳಿಂದ ಓಝೋನ್ ಪದರದ ಸಂರಕ್ಷಣೆಯ ಕುರಿತಾಗಿ ಭಿತ್ತಿಚಿತ್ರ ಪ್ರದರ್ಶನ, ಪ್ರಹಸನ, ಓಝೋನ್ ಗೀತೆ ಹಾಗೂ ಪವರ್ ಪಾಯಿಂಟ್ ಪ್ರಸೆಂಟೇಶನ್ ನಡೆಯಿತು. ಎಂಟನೆ ತರಗತಿಯ ವಿದ್ಯಾರ್ಥಿಗಳು ತರಗತಿ ಶಿಕ್ಷಕಿಯರಾದ ಸಪ್ನಾ ,ಪದ್ಮಶ್ರಿ ಹಾಗೂ ಅನಿತಾರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟರು.

ಸಶಹೀಲಾ ಓರೆನ್ ದಿನದ ಮಹತ್ವದ ಬಗ್ಗೆ ವಿವರಿಸಿದರು. ಶಮನ್ ಶೈಲೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಹೇಮಲತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News