152 ಮಂದಿ ಹಾಜಿಗಳ 3ನೆ ತಂಡ ಆಗಮನ
Update: 2016-09-20 17:45 IST
ಮಂಗಳೂರು, ಸೆ. 20: ಕೇಂದ್ರ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡ ಯಾತ್ರಿಕರ ಮೂರನೆ ತಂಡ ಇಂದು ಆಗಮಿಸಿದೆ. 152 ಮಂದಿ ಹಾಜಿಗಳನ್ನು ಹೊತ್ತ ಏರ್ ಇಂಡಿಯಾವು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ.
ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ರಾಜ್ಯ ಹಜ್ ಸಮಿತಿಯ ಅಧಿಕಾರಿ ಫೈರೋಝ್ ಪಾಶಾ, ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಿ. ಮಹ್ಮೂದ್ ಹಾಜಿ, ವಕ್ಫ್ ಸಲಹಾ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ, ವಕ್ಫ್ ಅಧಿಕಾರಿ ಅಬೂಬಕರ್ ಉಪಸ್ಥಿತರಿದ್ದರು.
ಸೆ. 21ರಂದು ಕೊನೆಯ ತಂಡ
ಸೆಪ್ಟಂಬರ್ 21ರಂದು ಬೆಳಗ್ಗೆ 9:40ಕ್ಕೆ ಹಾಜಿಗಳ ಕೊನೆಯ ತಂಡ ಆಗಮಿಸಲಿದೆ.