ಅಮ್ಟೂರು ಬದ್ರಿಯ ಜುಮ್ಮಾ ಮಸೀದಿ ನವೀಕರಣಕ್ಕೆ ಶಿಲಾನ್ಯಾಸ
Update: 2016-09-20 18:49 IST
ಬಂಟ್ವಾಳ, ಸೆ.20: ಅಮ್ಟೂರಿನ ಬದ್ರಿಯ ಜುಮಾ ಮಸೀದಿಯು ನವೀಕರಣಗೊಳ್ಳಲಿದ್ದು, ನವೀಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು.
ಮಸೀದಿ ಖತೀಬ್ ಅಬ್ದುರ್ರಝಾಕ್ ಅಂಜದಿ ಶಿಲಾನ್ಯಾಸಕ್ಕೆ ನೇತೃತ್ವ ವಹಿಸಿದರು.
ಈ ಸಂದರ್ಭ ಮಸೀದಿಯ ಸದರ್ ಇಮಾಮಿ ಬಾಳೆಪುನಿ, ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಉಪಾಧ್ಯಕ್ಷ ಹಾಜಿ ಅಬ್ದುಸ್ಸಲಾಂ, ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್ ಕರಿಂಗಾನ, ಕೋಶಾಧಿಕಾರಿ ಕಬೀರ್ ಅಮ್ಟೂರು, ತಪ್ಶೀರ್ ಅಮ್ಟೂರು, ಸುಲೈಮಾನ್ ನೆತ್ತಿಕಲ್ ಹಾಗು ಊರ ನಾಗರಿಕರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಸೀಫ್ ಅಮ್ಟೂರು ವಂದಿಸಿದರು.