ಸೆ.25ರಂದು ಡಾ.ಸಾರಾ ಅಬೂಬಕರ್‌ರ ಅನುವಾದಿತ ಕೃತಿ ಬಿಡುಗಡೆ
Update: 2016-09-20 19:25 IST
ಮಂಗಳೂರು,ಸೆ.20:ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ವತಿಯಿಂದ ಸೆ.25ರಂದು ಮಧ್ಯಾಹ್ನ 2:30ಕ್ಕೆ ಸಯ್ಯದ್ ಮೆಹಬೂಬ್ ಶಾ ಖಾದ್ರಿ ಅವರ ಮರಾಠಿಯ ‘ದಾಗದಾವಾರ್ಚಿ ಪೆರಾನು ’ಕೃತಿಯನ್ನು ಅಂಜಲಿ ಪಟವರ್ಧನ್ ಆಂಗ್ಲ ಭಾಷೆಗೆ ಅನುವಾದಿಸಿದ್ದು, ಈ ಕೃತಿಯನ್ನು ನಾಡೋಜ ಸಾರಾ ಅಬೂಬಕ್ಕರ್ ಕನ್ನಡಕ್ಕೆ ಅನುವಾದಿಸಿದ ‘ಮುಸ್ಲಿಂ ಮಹಿಳೆಯರು ಮತ್ತು ತಲಾಖ್’ ಕೃತಿಯ ಅನಾವರಣ ನಡೆಯಲಿದೆ.
ಲೇಖಕಿ ಡಾ.ಸರ್ಫ್‌ರಾಝ್ ಚಂದ್ರಗುತ್ತಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಮುಮ್ತಾಝ್ ಬೇಗಂ ಕೃತಿ ಪರಿಚಯ ಮಾಡಲಿದ್ದಾರೆ. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಶೈಲಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ