×
Ad

ಸಂಚಾರಿ ನಿಯಮ ಉಲ್ಲಂಘನೆ: 43 ಪ್ರಕರಣ ದಾಖಲು

Update: 2016-09-20 23:06 IST

ಮಂಗಳೂರು, ಸೆ. 20: ನಗರದ ಎಕ್ಕೂರು ರಾಷ್ಟ್ರೀಯ ಹೆದ್ದಾರಿ ಸಹಿತ ನಗರದ ವಿವಿಧೆಡೆ ಸಂಚಾರಿ ನಿಯಮ ಉಲ್ಲಂಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಸಂಚಾರಿ ಪೊಲೀಸರು 43 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಎಕ್ಕೂರು-ಜಪ್ಪಿನಮೊಗರು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಕೈಗೊಂಡ 5 ವಾಹನಗಳ ಮೇಲೆ, ಳ್ನೀರ್ ಸಮೀಪ 32 ವಾಹನಗಳ ಚಾಲಕರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. 5 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಪಿವಿಎಸ್ ಜಂಕ್ಷನ್‌ನಿಂದ ಬಂಟ್ಸ್‌ಹಾಸ್ಟೆಲ್ ರಸ್ತೆ ಬದಿ ಪಾರ್ಕ್ ಮಾಡಿದ 6 ಬಸ್‌ಗಳ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News