×
Ad

ಇಂದಿನ ಕಾರ್ಯಕ್ರಮ

Update: 2016-09-20 23:37 IST

ಸಾಮಾನ್ಯ ಸಭೆ: ಉಡುಪಿ ನಗರಸಭೆಯ ಸಾಮಾನ್ಯ ಸಭೆ. ಅಧ್ಯಕ್ಷತೆ ಮೀನಾಕ್ಷಿ ಮಾಧವ ಬನ್ನಂಜೆ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ನಗರಸಭೆಯ ಸತ್ಯಮೂರ್ತಿ ಸಭಾಂಗಣ, ಉಡುಪಿ. ಶಾಂತಿಗಾಗಿ ನಡಿಗೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿಶ್ವ ಶಾಂತಿ ದಿನದ ಅಂಗವಾಗಿ ‘ಶಾಂತಿಗಾಗಿ ನಡಿಗೆ ಮತ್ತು ಗಿಡ ನೆಡುವ’ ಕಾರ್ಯಕ್ರಮ. ಸಮಯ: ಬೆಳಗ್ಗೆ 10:15ಕ್ಕೆ. ಸ್ಥಳ: ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಬಳಿ, ಮಣಿಪಾಲ.
ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಪರಾಹ್ನ 3ರಿಂದ ಭಾಗವತ ಸಪ್ತಾಹ ವಿದ್ವಾನ್‌ಸಗ್ರಿ ರಾಘವೇಂದ್ರ ಉಪಾಧ್ಯಾಯರಿಂದ ಪ್ರವಚನ, ಬೆಂಗಳೂರಿನ ಪ್ರೊ.ಎನ್.ವೆಂಕಟೇಶಾಚಾರ್ಯರಿಂದ ಸಂಜೆ 5:45ಕ್ಕೆರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರಶ್ರೀಗಳಿಂದ ಅನುಗ್ರಹ ಸಂದೇಶ. ರಾತ್ರಿ 7ರಿಂದ ರಾಜಾಂಗಣದಲ್ಲಿಬೆಂಗಳೂರಿನ ರಾಘವೇಂದ್ರರಿಂದ ಭಕ್ತಿ ಸಂಗೀತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News