ಕಟೌಟ್, ಬ್ಯಾನರ್ ತೆರವಿಗೆ ಸೂಚನೆ
Update: 2016-09-20 23:37 IST
ಮಂಗಳೂರು, ಸೆ.20: ಮಹಾನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡುವ ಅಂಗವಾಗಿ ಪಾಲಿಕೆಯು ಅನಧಿಕೃತ ಕಟೌಟ್, ಫ್ಲೆಕ್ಸ್‌ಬ್ಯಾನರ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಆದರೆ ಕೆಲವು ಕಾರ್ಯಕ್ರಮ ಸಂಘಟಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಿನೆಮಾ ಪ್ರಚಾರಕರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದವರು ಕಟೌಟ್, ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಮತ್ತೆ ಪಾಲಿಕೆ ವ್ಯಾಪ್ತಿಯಲ್ಲಿ ಹಾಕುತ್ತಿರುವುದು ಕಂಡುಬರುತ್ತಿದೆ.
ಈ ರೀತಿ ಕಟೌಟ್, ಬ್ಯಾನರು ಪೋಸ್ಟರ್‌ಗಳನ್ನು ಹಾಕುತ್ತಿರು ವುದು ಕಾನೂನು ಬಾಹಿರವಾಗಿದ್ದು, ಸಂಬಂಧ ಪಟ್ಟವರು ತಕ್ಷಣ ಎಲ್ಲ ಕಟೌಟ್, ಫ್ಲೆಕ್ಸ್‌ಬ್ಯಾನರು, ಪೋಸ್ಟರ್‌ಗಳನ್ನು ತೆರವುಗೊಳಿಸತಕ್ಕದ್ದು. ತಪ್ಪಿದಲ್ಲಿ ಕರ್ನಾಟಕ ತೆರೆದ ಜಾಗ ತಡೆ ಕಾಯ್ದೆ 1981ರನ್ವಯ ಸಂಬಂಧಪಟ್ಟವರಿಗೆ ದಂಡನೆಯನ್ನು ವಿಧಿಸಿ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ವಹಿಸಲಾಗುವುದು ಎಂದು ಮನಪಾ ಪ್ರಕಟನೆ ತಿಳಿಸಿದೆ.