26 ದೇಶಗಳ ಕರೆನ್ಸಿ ಗುರುತಿಸುವ, ಇಂಗ್ಲಿಷ್‌ನಿಂದ ಮರಾಠಿಗೆ ಅನುವಾದಿಸುವ 18 ತಿಂಗಳ ಅದ್ವಿತೀಯ ಬಾಲೆ

Update: 2016-09-21 03:14 GMT

ನಾಗ್ಪುರ,ಸೆ.21: ಈ ಅದ್ಭುತ ಬಾಲಕಿಯ ಹೆಸರು ಅದ್ವಿಕಾ ಬಾಲೆ. 26 ದೇಶಗಳ ಕರೆನ್ಸಿಗಳನ್ನು, ವಿಶ್ವದ ಏಳು ಅದ್ಭುತಗಳನ್ನು ಗುರುತಿಸಬಲ್ಲಳು. ಪ್ರಾಣಿಗಳ ಹೆಸರನ್ನು ಇಂಗ್ಲಿಷ್‌ನಿಂದ ಮರಾಠಿಗೆ ಭಾಷಾಂತರಿಸಬಲ್ಲಳು. ಸಾಮಾನ್ಯರಿಗೆ ಅಸಾಧ್ಯವಾದ್ದನ್ನು ಸಾಧಿಸಿರುವ ಈ ಅದ್ಭುತ ಬಾಲೆಗೆ ಇನ್ನೂ ಹದಿನೆಂಟು ತಿಂಗಳು!

ಬಾಲೆಯ ಸಾಮರ್ಥ್ಯದ ಬಗ್ಗೆ ತಾಯಿ ಅಸವರಿ ಬಾಲೆ ಅವರಿಗೇ ಅಪನಂಬಿಕೆ. ಏಕೆಂದರೆ ಪುಟ್ಟ ಮಗು ಮಾತನಾಡಲು ಆರಂಭಿಸಿದ್ದೇ ಕಳೆದ ತಿಂಗಳು. ಮಗುವಿಗೆ ಆರು ತಿಂಗಳಿದ್ದಾಗಲೇ, ಮಗುವಿಗೆ ಹಲವು ಮಾಹಿತಿಗಳನ್ನು ತಾಯಿ ಓದಿ ಹೇಳುತ್ತಿದ್ದರು. ಹರಿದಾಡಲು ಆರಂಭಿಸಿದಾಗ ಅಕ್ಷರ, ಹಣ್ಣು ಹಾಗೂ ಪ್ರಾಣಿಗಳ ಪಟ್ಟಿ ತೋರಿಸಿದ್ದರು. "ಎಂಟು ತಿಂಗಳಾದಾಗ ಮಗುವಿಗೆ ದೇಶಗಳ ಬಗ್ಗೆ, ಕರೆನ್ಸಿಗಳ ಬಗ್ಗೆ, ವಿಶ್ವದ ಅದ್ಭುತಗಳ ಬಗ್ಗೆ ಬೋಧಿಸುತ್ತಿದ್ದೆ. ಹತ್ತು ತಿಂಗಳಲ್ಲಿ ಆಕೆ ದೇಹದ ಭಾಗಗಳನ್ನು ಗುರುತಿಸುತ್ತಿದ್ದಳು" ಎಂದು ಮಗುವಿನ ದಂಪತಿ ಸಾಗರ್ ಹಾಗೂ ಅಸವರಿ ಹೇಳುತ್ತಾರೆ.

ತಂದೆ- ತಾಯಿ ಸಿದ್ಧಪಡಿಸಿದ ದೊಡ್ಡ ಪ್ರಶ್ನಾವಳಿಯಲ್ಲಿ ಸುಮಾರು 2 ಗಂಟೆ ಕಾಲ 100 ಪ್ರಶ್ನೆಗಳನ್ನು ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಕೇಳಿದಾಗ ಅರಳು ಹುರಿದಂತೆ ಉತ್ತರಿಸಿದ ಬಾಲೆ ಎರಡು ಬಾರಿ ಮಾತ್ರ ತಡವರಿಸಿದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News