ಪಾದಾಚಾರಿಗೆ ಢಿಕ್ಕಿ ಹೊಡೆದು ಶವವನ್ನು ಹೊತ್ತೊಯ್ದ ಕಾರು!
Update: 2016-09-21 11:19 IST
ಮೆಹಬೂಬ್‌ನಗರ, ಸೆ.21: ತೆಲಂಗಾಣದ ಮೆಹಬೂಬ್ ನಗರದ ಹೈವೇಯಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಪಾದಾಚಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಮೇಲಕ್ಕೆ ಹಾರಿದ ವ್ಯಕ್ತಿಯ ಶವ ಕಾರಿನ ಮೇಲ್ಭಾಗಕ್ಕೆ ಎಸೆಯಲ್ಪಟ್ಟಿದೆ.
ಢಿಕ್ಕಿಯ ಬಳಿಕ ಚಾಲಕ ಕಾರನ್ನು ನಿಲ್ಲಿಸದ ಕಾರಣ ಶವಹೊತ್ತು ಮೂರು ಕಿ.ಮೀ. ಸಾಗಿದ್ದಾನೆ. ಇದನ್ನು ಗಮನಿಸಿದ ಬೈಕ್ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳೀಯರ ಸಹಾಯದಿಂದ ಕಾರನ್ನು ತಡೆ ಹಿಡಿದಿದ್ದಾರೆ. ಆದರೆ, ಚಾಲಕ ರಾಜಶೇಖರ್ ರೆಡ್ಡಿ ಎಂಬಾತ ಪರಾರಿಯಾಗಿದ್ದಾನೆ.
38ರ ಪ್ರಾಯದ ಶ್ರೀನಿವಾಸುಲು ಎಂಬ ಕಾರ್ಮಿಕ ರಾತ್ರಿ 10ರ ಸುಮಾರಿಗೆ ಬಸ್ ಸ್ಟಾಂಡ್ ಸಮೀಪ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ.