ಅಲ್ಪಸಂಖ್ಯಾತರ ಸಚಿವಾಲಯದ ಕಚೇರಿಗೆ ಸಂಘಪರಿವಾರದ ಹಿರಿಯನ ಹೆಸರು !
ಹೊಸದಿಲ್ಲಿ, ಸೆಪ್ಟಂಬರ್ 21: ಉರಿಯಲ್ಲಾದ ಭಯೋತ್ಪಾದಕ ದಾಳಿ ಕಾಶ್ಮೀರದ ಬಿಕ್ಕಟ್ಟು ಎದುರಿಸಲು ಉಪಾಯವಿಲ್ಲದೆ ಪರದಾಡುತ್ತಿರುವುದರ ನಡುವೆ ರಾಜಧಾನಿ ದಿಲ್ಲಿಯಲ್ಲಿ ಬಿರುಸಿನ ಚಟುವಟಿಕೆಗಳು ಕಟ್ಟಡ ಮತ್ತು ರಸ್ತೆಗಳ ಹೆಸರು ಬದಲಾಯಿಸುವುದಕ್ಕಾಗಿ ನಡೆಯುತ್ತಿವೆ ಎಂದು ವರದಿಯಾಗಿದೆ.ಮಂಗಳವಾರ ಒಂದು ಕಟ್ಟಡದ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಕೆಲಸವೂ ನಡೆಯಿತು.
ಅಲ್ಪಸಂಖ್ಯಾತರ ಸಚಿವಾಲಯವಿರುವ ಪರ್ಯಾವರನ್ ಭವನ್ ಇನ್ನುಮುಂದೆ ಸಂಘಪರಿವಾರದ ಆಚಾರ್ಯ ಪಂಡಿತ್ ದೀನದಯಾಳ್ ಉಪಧ್ಯಾಯರ ಹೆಸರಿನಲ್ಲಿ ಕರೆಯಲಾಗುತ್ತದೆ. ಪಂಡಿತ್ ದೀನದಯಾಳ್ ಅಂತ್ಯೋದಯ ಭವನ್ ಎಂದು ಹೆಸರು ಬದಲಿಸುವ ಪ್ರಕ್ರಿಯೆಯನ್ನು ಕೇಂದ್ರ ಸಚಿವ ಎಂ ವೆಂಕಯ್ಯನಾಯ್ಡು ನಿರ್ವಹಿಸಿದ್ದಾರೆ. ದೇಶದ ಕೊನೆ ವ್ಯಕ್ತಿಕೂಡಾ ಮುಂದೆ ಬರಬೇಕೆಂಬ ಉಪಾಧ್ಯಾಯರ ಸಂದೇಶವೇ ಅಂತ್ಯೋದಯವಾಗಿದೆ ಇದು ಅಲ್ಪಸಂಖ್ಯಾತ ಸಚಿವಾಲಯಕ್ಕೆ ಹೆಚ್ಚು ಸೂಕ್ತ ಹೆಸರು ಆಗಿದೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ. ಪರಿಸರ ಸಚಿವಾಲಯ ಕೂಡಾ ಇರುವ ಸಿಜಿಒ ಕಾಂಪ್ಲೆಕ್ಸ್‌ನ ಈ ಕಟ್ಟಡವನ್ನು ಈ ಹಿಂದೆ ಪರ್ಯಾವನ್ ಭವನ್ ಎಂದುಕರೆಯಲಾಗುತ್ತಿತ್ತು. ಮಾಜಿಸಚಿವೆ ನಜ್ಮಾ ಹೆಫ್ತುಲ್ಲ ಹೆಸರು ಬದಲಾಯಿಸಲು ಶಿಫಾರಸು ಮಾಡಿದ್ದರು ಎಂದು ವೆಂಕಯ್ಯನಾಯ್ಡು ತಿಳಿಸಿದ್ದಾರೆ.
ಪ್ರಧಾನಿ ಮತ್ತು ಇತರ ಪ್ರಮುಖ ವ್ಯಕ್ತಿಗಳ ಮನೆಗಳಿರುವ ರೇಸ್‌ಕೋರ್ಸ್‌ರಸ್ತೆಯ ಹೆಸರನ್ನು ಬದಲಾಯಿಸುವ ಕುರಿತು ಇನ್ನೊಂದುವಿವಾದ ನೆಲೆಯಾಗಿದೆ. ರೇಸ್‌ಕೋರ್ಸ್ ಎಂಬುದು ಭಾರತದ ಸಂಸ್ಕೃತಿಗೊಪ್ಪುವುದಿಲ್ಲ ಈ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಬಿಜೆಪಿ ಎಂಪಿ ಮೀನಾಕ್ಷಿ ಲೇಖಿ ಬೇಡಿಕೆಯಿರಿಸಿದ್ದಾರೆ. ದೀನದಯಾಳ್ ಉಪಾಧ್ಯಯರ ಜನ್ಮಶತಾಬ್ದಿಯ ಹಿನ್ನೆಲೆಯಲ್ಲಿ ಅವರ ಸಂದೇಶವನ್ನು ಒಳಗೊಂಡ ಏಕಾತ್ಮ ಮಾರ್ಗ್ ಎಂದು ಈ ರಸ್ತೆಗೆ ಹೆಸರಿರಿಸಬಹುದೆಂದು ಲೇಖಿ ಸಲಹೆಯಾಗಿದೆ. ಆದರೆ ಸಂಘಪರಿವಾರದ ಹಿತಾಸಕ್ತಿಯಂತೆ ಹೆಸರು ಬದಲಾಯಿಸಲು ಸಮ್ಮತಿಸುವುದಿಲ್ಲ ಎಂದು ಘೋಷಿಸಿ ಆಮ್ ಆದ್ಮಿ ರಂಗಪ್ರವೇಶಿಸಿದೆ. ದಿಲ್ಲಿ ಶಾಸಕ ಮತ್ತು ಮಾಜಿ ಕಮಾಂಡರ್ ಆದ ಸುರೀಂದರ್ ಸಿಂಗ್ ಹೆಸರು ಬದಲಿಸಲೇ ಬೇಕೆಂದಿದ್ದರೆ ವೀರ ಜವಾನರ ಹೆಸರನ್ನಿರಿಸಬೇಕು ಎಂದು ಆಗ್ರಹಿಸಿದ್ದಾರೆ. ಅಕ್ಬರ್ ರಸ್ತೆಯ ಹೆಸರನ್ನು ಮಹಾರಾಣಾ ಪ್ರತಾಪ್ ಎಂದು ಹೆಸರಿಸಬೇಕೆಂದು ಸಂಘಪರಿವಾರ ಮತ್ತೊಮ್ಮೆ ಪ್ರಸ್ತಾಪ ಮುಂದಿಟ್ಟಿದೆ ಎಂದು ವರದಿ ತಿಳಿಸಿದೆ.