ಜೈಲಿನ ಭದ್ರತಾ ಸಿಬ್ಬಂದಿಗೆ ಮೆಣಸಿನ ಹುಡಿ ಎರಚಿ 6 ಕೈದಿಗಳು ಪರಾರಿ
ಹಮೀರ್‌ಪುರ, ಸೆ.21: ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯ ಲಚರ್ ಸುರಕ್ಷಾ ವ್ಯವಸ್ಥೆಯ ಲಾಭವೆತ್ತಿ ನ್ಯಾಯಾಲಯದಿಂದ ಕಾರಾಗೃಹ ಬರುವಾಗ ಗೇಟ್‌ನ ಹೊರಗೆ ಕೈದಿಯೊಬ್ಬ ಭದ್ರತಾಸಿಬ್ಬಂದಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದು, ಆರು ಮಂದಿ ಅಪಾಯಕಾರಿ ಕೈದಿಗಳು ಪರಾರಿಯಾಗಿದ್ದಾರೆ.ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇವರಲ್ಲೊಬ್ಬ ಭದ್ರತಾ ಸಿಬ್ಬಂದಿಯ ಕೈಯಲ್ಲಿದ್ದ ರೈಫಲನ್ನು ಕಿತ್ತುಕೊಂಡು ಹೋಗಿದ್ದಾನೆ. ಜೈಲಿನ ಹಿಂದಿರುವ ಬೇತ್‌ವಾ ನದಿಗೆ ಹಾರಿದ್ದಾರೆ. ಪೊಲೀಸರು ನದಿಗೆ ಸುತ್ತುವರಿದರೂ ಇಬ್ಬರು ಕೈದಿಗಳನ್ನು ಮಾತ್ರ ಸೆರೆಹಿಡಿಯಲು ಸಾಧ್ಯವಾಗಿದೆ.
ವರದಿಯಾಗಿರುವ ಪ್ರಕಾರ ಜಿಲ್ಲಾ ನ್ಯಾಯಾಲಯವೊಂದಕ್ಕೆ ಹಾಜರು ಪಡಿಸಿ ಕೈದಿಗಳನ್ನು ಪೊಲೀಸು ವಾಹನದಲ್ಲಿ ಮರಳಿ ಜೈಲಿಗೆ ಕರೆತರುವ ವೇಳೆ ಈ ಘಟನೆ ಸಂಭ ವಿಸಿದೆ. ಕೈದಿಗಳನ್ನು ವಾಹನದಿಂದ ಇಳಿಸಿ ಕಾರಾಗೃಹದ ಗೇಟಿನ ಹತ್ತಿರ ಬಂದಾಗ ಸಾಲಿನಲ್ಲಿದ್ದ ಕೈದಿಯೊಬ್ಬ ಭದ್ರತಾಸಿಬ್ಬಂದಿಗಳ ಕಣ್ಣಿಗೆ ಮೆಣಸಿನ ಹುಡಿ ಎರಚಿ ಓಟಕ್ಕಿತ್ತಿದ್ದಾರೆ. ತಪ್ಪಿಸಿಕೊಂಡ ಕೈದಿಗಳಲ್ಲಿ ಖತರ್‌ನಾಕ್ ಕೈದಿ ಬಬ್ಲಿ ಯಾದವ್ ಎಂಬಾತ ಇದ್ದಾನೆ ಎಂದು ವರದಿ ತಿಳಿಸಿದೆ.