×
Ad

ಸೌಹಾರ್ದ ಫ್ರೆಂಡ್ಸ್ ಕಂಬಳಬೆಟ್ಟು ತಂಡಕ್ಕೆ ಕಬಡ್ಡಿ ಪ್ರಶಸ್ತಿ

Update: 2016-09-21 12:56 IST

ವಿಟ್ಲ, ಸೆ.21: ಕಂಬಳಬೆಟ್ಟು ಸೌಹಾರ್ದ ಫ್ರೆಂಡ್ಸ್ ಇದರ ಅಶ್ರಯದಲ್ಲಿ ಇತ್ತೀಚೆಗೆ ಕಂಬಳಬೆಟ್ಟುವಿನಲ್ಲಿ ನಡೆದ 55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಸೌಹಾರ್ದ ಫ್ರೆಂಡ್ಸ್ ಕಂಬಳಬೆಟ್ಟು ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

48 ತಂಡಗಳು ಭಾಗವಹಿಸಿದ್ದ ಈ ಕಬಡ್ಡಿ ಪಂದ್ಯಾಟದಲ್ಲಿ ಕೊಡಿಪ್ಪಾಡಿಯ ವಿವೇಕ್ ಫ್ರೆಂಡ್ಸ್ ದ್ವಿತೀಯ, ಸಿಎಫ್‌ಸಿ ಒಕ್ಕೆತ್ತೂರು ತಂಡ ತೃತೀಯ ಹಾಗೂ ನೆಲ್ಯಾಡಿ-ಕೋಲ್ಪೆಯ ಫ್ರೆಂಡ್ಸ್ ಕೋಲ್ಪೆ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಕಂಬಳಬೆಟ್ಟು ತಂಡದ ಚಂದ್ರಪಾಲ್ ಉತ್ತಮ ದಾಳಿಗಾರ ಹಾಗೂ ಕೊಡಿಪ್ಪಾಡಿ ತಂಡದ ಇರ್ಫಾನ್ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಪಂದ್ಯಾಟವನ್ನು ಇಸ್ಮಾಯೀಲ್ ಬ್ರೈಟ್ ಪೋಳ್ಯ ಉದ್ಘಾಟಿಸಿದರು. ಕಂಬಳಬೆಟ್ಟು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ನೆಕ್ಕರೆ ಅಧ್ಯಕ್ಷತೆ ವಹಿಸಿದ್ದರು. ಅಮೆಚೂರು ಕಬಡ್ಡಿ ಅಸೋಸಿಯೇಶನ್ ದ.ಕ. ಜಿಲ್ಲಾ ಸಮಿತಿ ಸದಸ್ಯ ಕೆ.ಎಸ್. ಹಮೀದ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿಟ್ಲಮುಡ್ನೂರು ಗ್ರಾ,ಪಂ ಸದಸ್ಯ ಅಬ್ದುರ್ರಹ್ಮಾನ್ (ಅದ್ದು), ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ಉದ್ಯಮಿಗಳಾದ ಅಬ್ದುರ್ರಝಾಕ್ ಕೆ.ಕೆ. ಕಂಬಳಬೆಟ್ಟು, ಮನ್ಸೂರು ಕಂಬಳಬೆಟ್ಟು, ಮೋನು ಸಾದಾತ್‌ನಗರ, ಅಬ್ದುಲ್ ರರಝಾಕ್ ಮಟನ್‌ಸ್ಟಾಲ್, ಅಬ್ದುಲ್ ಗಪೂರ್ ನೂಜಿ, ರಫೀಕ್ ಎಂ.ಕೆ. ಕಂಬಳಬೆಟ್ಟು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಶಾಂತಿ ಕ್ರಿಕೆಟರ್ಸ್‌ ಕಂಬಳಬೆಟ್ಟು ತಂಡದ ಹೆಸರಾಂತ ಹಿರಿಯ ಕ್ರಿಕೆಟ್ ಆಟಗಾರ ಅಕ್ಬರ್ ನಂದಾವರರನ್ನು ಸನ್ಮಾನಿಸಲಾಯಿತು. ಕಬಡ್ಡಿ ಪಂದ್ಯಾಟದ ಮುಖ್ಯ ಸಂಘಟಕರಾದ ಫಯಾಝ್ ನಡುಮಜಲು, ರವೂಫ್ ಕಂಬಳಬೆಟ್ಟು, ಹಾಫಿಲ್ ಕೊಳಂಬೆ, ಅಝೀಝ್ ಸಾದಾತ್‌ನಗರ, ನೌಫಲ್ ಕೊಳಂಬೆ, ರಫೀಕ್ ನೂಜಿ, ಸಿದ್ದೀಕ್ ಕಂಬಳಬೆಟ್ಟು, ಇಲ್ಯಾಸ್ ಕಂಬಳಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News