×
Ad

ಸರ್ವಪಕ್ಷ ಸಭೆಗೆ ಬಿಜೆಪಿ ಬಹಿಷ್ಕಾರ: ಸಚಿವರ ಆಕ್ಷೇಪ

Update: 2016-09-21 13:35 IST

ಬೆಂಗಳೂರು, ಸೆ.21: ಕಾವೇರಿ ಜಲವಿವಾದ ಕುರಿತು ಚರ್ಚಿಸಲು ಕರೆಯಲಾಗಿದ್ದ ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆದೇಶ ಕೊಟ್ಡಿರೋದು ದೊಡ್ಡ ಶಾಕ್. ನಾವು ಕಟ್ಟಿದ ಕನ್ನಂಬಾಡಿಕಟ್ಡೆಗೆ ಅವರು ಬೀಗ ಹಾಕಿ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ರಾಜ್ಯದ ಜನರ ಹಿತ ಕಾಯುವುದು ನಮ್ಮ ಕರ್ತವ್ಯ. ಯಾರೂ ಕಾನೂನು ಕೈಗೆ ತೆಗೆದುಕೊಂಡು ಆಸ್ತಿಪಾಸ್ತಿಗೆ ಹಾನಿ ಮಾಡಬಾರದು. ಬಿಜೆಪಿಯವರು ತಮ್ಮ ಸಂಸದರ ಜತೆ ಹೋಗಿ ಪ್ರಧಾನಿ ಮಧ್ಯಸ್ಥಿಕೆಗೆ ಒಪ್ಪಿಸಬೇಕಿತ್ತು.ಅದನ್ನು ಬಿಟ್ಟು ಇವತ್ತು ಸರ್ವ ಪಕ್ಷಗಳ ಸಭೆಗೆ ಬಹಿಷ್ಕಾರ ಹಾಕಿರುವುದನ್ನು ನೋಡಿದರೆ ಅವರ ಉದ್ದೇಶ ಏನು ಎಂದು ಗೊತ್ತಾಗುತ್ತದೆ. ಹಿಂದೆ ನಾವು ಅವರ ಮಾತಿನಂತೆಯೇ ನಡೆದಿದ್ದೇವೆ. ಆಗ ಸಲಹೆ ಕೊಟ್ಟು ಈಗ ಬರಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.      

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರತಿಕ್ರಿಯಿಸಿ, ಕಾವೇರಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನಿಪ್ರಧಾನಿಯಾಗಿದ್ದಾರೆ. ವಿದೇಶದ ಸುದ್ದಿಗಳ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಕರ್ನಾಟಕದ ಸಮಸ್ಯೆ ಕುರಿತು ಮಾತನಾಡುತ್ತಿಲ್ಲ.ಈ ಹಿಂದೆ ಪ್ರಧಾನಿಗಳಾಗಿದ್ದವರು ಕಾವೇರಿ ವಿಚಾರವಾಗಿ ಮಧ್ಯಸ್ಥಿಕೆಯ ವಹಿಸಿ ಇತ್ಯರ್ಥಪಡಿಸಲು ಮುಂದಾಗಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮೋದಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ವಿಚಾರ ನೀರಿನ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.                         

 ಸಚಿವ ರಮೇಶ್ ಕುಮಾರ್ ಮಾತನಾಡಿ, ಸಾಂವಿಧಾನಿಕ ದೇಶದಲ್ಲಿ ನ್ಯಾಯಾಲಯದ ತೀರ್ಪು ಉಲ್ಲಂಘನೆ ಮಾಡಲು ಬರುವುದಿಲ್ಲ. ನಮ್ಮ ಮೇಲೆ ರಾಜ್ಯದ ಜನರು ಹೊಣೆಗಾರಿಕೆ ನೀಡಿದ್ದಾರೆ. ಸರ್ವಪಕ್ಷ ಸಭೆಗೆ ಯಾರು ಬರಲಿ ಬರದೇ ಇರಲಿ ಸರಕಾರ ಮಾತ್ರ ಕಾವೇರಿ ವಿಚಾರವಾಗಿ ರಾಜ್ಯದ ಜನರ ಕಷ್ಟಕಾರ್ಪಣೆಗಳಿಗೆ ಸ್ಪಂದನೆಯ ನೀಡಲಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ರಮೇಶಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News