ಸೆಲ್ಫಿಯ ಯಂತ್ರವಾಗಿರುವ ಪ್ರಧಾನಿ: ರಾಹುಲ್
ಕಾನ್‌ಪುರ, ಸೆಪ್ಟಂಬರ್ 21: ಉರಿ ಭಯೋತ್ಪಾದನಾ ದಾಳಿಯ ಕುರಿತು ಕೇಂದ್ರಸರಕಾರದ ವಿರುದ್ಧ ರಾಜಕೀಯ ಹಲ್ಲೆ ತೀಕ್ಷ್ಣಗೊಂಡಿದೆ. ಮಂಗಳವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉರಿಯಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಉದ್ಧರಿಸಿ, ಪ್ರಧಾನಿ ನರೇಂದ್ರಮೋದಿಯನ್ನು ತೀವ್ರವಾಗಿ ಟೀಕಿಸಿದ್ದು, "ಮೋದಿ, ಬರೇ ಸುಳ್ಳು ಭರವಸೆ ನೀಡುತ್ತಾರೆ. ಕೇವಲ ಸೆಲ್ಫಿಯ ಯಂತ್ರ ಆಗಿ ಉಳಿದು ಬಿಟ್ಟಿದ್ದಾರೆಂದು ಲೇವಡಿ ಮಾಡಿದ್ದಾರೆಂದು ವರದಿಯಾಗಿದೆ
ವರದಿಯಾಗಿರುವ ಪ್ರಕಾರ ಕಾಂಗ್ರೆಸ್‌ನ ಕಿಸಾನ್ ಯಾತ್ರಾ ಕಾನ್‌ಪುರ ತಲುಪಿದ್ದ ವೇಳೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು "ರೈತರು ಮತ್ತು ದೇಶಕಾಯುವ ಯೋಧರಿಲ್ಲದೆ ದೇಶವನ್ನು ಅಸ್ತಿತ್ವದಲ್ಲಿ ಉಳಿಸಲು ಸಾಧ್ಯವಿಲ್ಲ. ಕಾಶ್ಮೀರದ ಕುರಿತು ಕೇಂದ್ರಸರಕಾರದ ಬಳಿಕ ಸರಿಯಾದ ನೀತಿಯೇ ಇಲ್ಲ. ದೇಶಸುರಕ್ಷೆಯ ವಿಚಾರವನ್ನು ಯಾವುದಾದರೂ ಸಾರ್ವಜನಿಕ ಸಭೆಯನ್ನು ನಿರ್ವಹಿಸುವಂತೆ ನಿರ್ವಹಿಸಲು ಸಾಧ್ಯವಿಲ್ಲ. ಅದು ಬಹುದೊಡ್ಡ ಗಂಭೀರ ವಿಚಾರವಾಗಿದೆ" ಎಂದು ಹೇಳಿದ್ದಾರೆ.
ನಂತರ ಜಲೌನದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಹುಲ್ ಟೀಕಿಸಿದ್ದಾರೆ.."ಮೋದಿ, ಬರೇ ಸುಳ್ಳು ಭರವಸೆ ನೀಡುತ್ತಾರೆ. ಕೇವಲ ಸೆಲ್ಫಿಯ ಯಂತ್ರ ಆಗಿ ಉಳಿದು ಬಿಟ್ಟಿದ್ದಾರೆಂದು" ಎಂದು ರಾಹುಲ್ ಇಲ್ಲಿ ಹೇಳಿದ್ದಾರೆ.ಬಿಜೆಪಿಯ ನಾಯಕರು ಚುನಾವಣೆಯ ಮೊದಲು ಗಲಭೆ ಸೃಷ್ಟಿಸುತ್ತಾರೆ. ಇದಕ್ಕೆ ಬಿಹಾರ. ಹರಿಯಾಣ,ಅಸ್ಸಾಮ್,ಮಹಾರಾಷ್ಟ್ರಗಳು ಉದಾಹರಣೆಯಾಗಿವೆ" ಎಂದು ಕೂಡಾ ಈ ಸಂದರ್ಭದಲ್ಲಿ ಅವರು ಬಿಜೆಪಿಯನ್ನು ಟೀಕಿಸಿದ್ದಾರೆಂದು ವರದಿಯಾಗಿದೆ.