ಚಾಕುತೋರಿಸಿ 90ವರ್ಷದ ವೃದ್ಧೆಯ ಅತ್ಯಾಚಾರ !

Update: 2016-09-21 11:18 GMT

ಕೊಲ್ಲಂ, ಸೆ.21: ಇಲ್ಲಿಗೆ ಸಮೀಪದ ಕಡಕ್ಕಲ್ ಎಂಬಲ್ಲಿ ತೊಂಬತ್ತುವರ್ಷ ವಯಸ್ಸಿನ ಹಿರಿಯ ಮಹಿಳೆಯೊಬ್ಬರನ್ನು ಚಾಕು ತೋರಿಸಿ ಬೆದರಿಕೆಹಾಕಿ ಅತ್ಯಾಚಾರಗೈದ ದಾರುಣ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಳಗ್ಗೆ ಎರಡು ಗಂಟೆಯ ವೇಳೆಗಾಗುವಾಗ ನೆರೆಯಾತ ಅಡಿಗೆಕೋಣೆ ಬಾಗಿಲು ಕೆಡವಿ ಒಳಗೆ ನುಗ್ಗಿ ಅತ್ಯಾಚಾರ ವೆಸಗಿದ್ದಾನೆಂದು ವೃದ್ಧೆ ತಿಳಿಸಿದ್ದು, ಬಾಯಿಗೆ ಬಟ್ಟೆ ತುರುಕಿ ಚಾಕು ತೋರಿಸಿ ಬೆದರಿಸಿ ಈ ಕೃತ್ಯವೆಸಗಿದ್ದಾನೆಂದು ವಯೋವೃದ್ಧ ಮಹಿಳೆ ಪೊಲೀಸರಲ್ಲಿ ಹೇಳಿದ್ದಾರೆ. ಒಬ್ಬಳೆ ಈ ಮಹಿಳೆ ವಾಸಿಸುತ್ತಿದ್ದು, ಜೊತೆಗೆ ಕ್ಯಾನ್ಸರ್ ರೋಗಿ ಕೂಡಾ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಕುರಿತು ಸಂಬಂಧಿಕರೊಡನೆ ಹೇಳಿದರೂ ಅವರು ಪೊಲೀಸರಿಗೆ ತಿಳಿಸಲಿಲ್ಲ. ಅತ್ಯಾಚಾರಕ್ಕೊಳಗಾದ ಬಳಿಕ ಚಿಕಿತ್ಸೆ ಕೂಡಾ ಸಿಕ್ಕಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಗ್ರಾಮೀಣ ಎಸ್ಪಿ ಅಜಿತಾ ಬೇಗಂ ನಿರ್ದೇಶನ ಪ್ರಕಾರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಈವರೆಗೂ ಬಂಧಿಸಿಲ್ಲ. ಮಹಿಳೆಯನ್ನು ಪೊಲೀಸರು ಕಡಕ್ಕಲ್ ತಾಲೂಕುಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ಕುರಿತು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಕೇರಳ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೋಸಾ ಕುಟ್ಟಿತಿಳಿಸಿದ್ದಾರೆ. ವೃದ್ಧೆಗೆ ಅಗತ್ಯವಿರುವ ಸಹಾಯವನ್ನು ನೀಡಲು ಅವರು ಸೂಚಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News