ಕಡಬ: ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
Update: 2016-09-21 17:18 IST
ಕಡಬ, ಸೆ.21. ಇಲ್ಲಿನ ಸಮುದಾಯ ಆಸ್ಪತ್ರೆಯ ಶೌಚಾಲಯದಲ್ಲಿ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಕೊಂಬಾರು ಸಮೀಪದ ರೆಂಜಾಳ ನಿವಾಸಿ ನಾಗಪ್ಪಗೌಡ ಎಂಬವರ ಪುತ್ರ ದಿವಾಕರ(26) ಎಂಬಾತ ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಕಡಬದಲ್ಲಿ ಪಿಕಪ್ ಚಾಲಕನಾಗಿದ್ದ ಈತ ಬುಧವಾರ ಕಡಬ ಆಸ್ಪತ್ರೆಗೆ ಆಗಮಿಸಿ ವಿಷ ಸೇವಿಸಿದ್ದು, ಇದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ 108 ಆಂಬುಲೆನ್ಸ್ ಮೂಲಕ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.