×
Ad

ಇಲ್ಲಿದೆ ಪ್ರಧಾನಿಯ ಹೊಸ ವಿಳಾಸ

Update: 2016-09-21 19:44 IST

ಹೊಸದಿಲ್ಲಿ, ಸೆ.27: ಪ್ರಧಾನಿ ನರೇಂದ್ರ ಮೋದಿಯವರ ವಿಳಾಸ ಇನ್ನು ಮುಂದೆ 7, ಲೋಕ ಕಲ್ಯಾಣ್ ಮಾರ್ಗ್ ಎಂದಾಗಲಿದೆ. ಪ್ರಧಾನಿಯ ನಿವಾಸವಿರುವ ರಸ್ತೆಯ ಹೆಸರು ಬದಲಾವಣೆಗೆ ಹೊಸದಿಲ್ಲಿ ಮಹಾನಗರ ಪಾಲಿಕೆ ಬುಧವಾರ ಅನುಮೋದನೆ ನೀಡಿದೆ.

ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗವೆಂದು ಬದಲಾಯಿಸಲು ತಾವು ಸರ್ವಾನುಮತಿಯಿಂದ ನಿರ್ಣಯಿಸಿದ್ದೇವೆಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಈ ನಿರ್ಧಾರಕ್ಕೆ ಬರಲು ವಿರೋಧಿಗಳಾದ ಬಿಜೆಪಿ ಹಾಗೂ ಎಎಪಿ ಪರಸ್ಪರ ಕೈ ಜೋಡಿಸಿದೆ.

ಜನ ಸಂಘದ ಸ್ಥಾಪಕ ದೀನ್‌ದಯಾಳ್ ಉಪಾಧ್ಯಾಯರ ತತ್ವದಂತೆ, ಒಮದು ರಾಷ್ಟ್ರ ಮತ್ತಿ ಸಮಗ್ರ ಮಾನವತೆಯ ಸಿದ್ಧಾಂತ ಸಾರುವ ‘ಏಕಾತ್ಮತಾ ಮಾರ್ಗ್’ ಎಂದು ಈ ರಸ್ತೆಯನ್ನು ಹೆಸರಿಸುವಂತೆ ಸ್ಥಳೀಯ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲಹೆ ನೀಡಿದ್ದರು. ಅದರಂತೆ ಹೆಸರಿಸಲು ಮಹಾನಗರ ಪಾಲಿಕೆ ಸಿದ್ಧವಾಗಿತ್ತು. ಪಾಲಿಕೆಯು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವುದರಿಂದ ಸರಕಾರವೇ ಹೆಸರನ್ನು ಸೂಚಿಸಿತ್ತೆಂದು ಸರಕಾರಿ ಮೂಲಗಳು ಹೇಳಿವೆ. ಆದರೆ, ದಿಲ್ಲಿ ಸರಕಾರ ಬೇರೆಯೇ ಹೆಸರಿರಿಸಿರುವುದು ಸ್ವಲ್ಪ ಆಶ್ಚರ್ಯಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಶಾಸಕ ಸೋಮನಾಥ ಭಾರ್ತಿ, ಹೆಸರು ಬದಲಾವಣೆಯಿಂದ ಏನೂ ಆಗದು. ಅದು ನಿರುದ್ಯೋಗ, ಹಣದುಬ್ಬರ ಇತ್ಯಾದಿಗಳಿಗೆ ಪರಿಹಾರ ನೀಡದು. ಪ್ರಧಾನಿ ಜನರಿಗೆ ಯಾವ ‘ಕಲ್ಯಾಣವನ್ನೂ’ ಮಾಡುತ್ತಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News