ಸೆ.25ರಂದು ‘ಗಿಳಿವಿಂಡು’ ಸಮಾವೇಶ
ಮಂಗಳೂರು, ಸೆ.21: ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ‘ಗಿಳಿವಿಂಡು’ ಸಮಾವೇಶ ಸೆ.25ರಂದು ಬೆಳಗ್ಗೆ 10ಕ್ಕೆ ಮಂಗಳಾ ಸಭಾಂಗಣದಲ್ಲಿ ಜರಗಲಿದೆ.
ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಉದ್ಘಾಟಿಸಲಿದ್ದು, ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸುವರು. ಬಳಿಕ ನಡೆಯುವ ಗಿಳಿವಿಂಡು ಹಿನ್ನೋಟ-ನುಡಿನೆನಪು ಕಾರ್ಯಕ್ರಮದಲ್ಲಿ ವಿವಿಯ 1968-1970ರ ಮೊದಲ ತಂಡದ ಹಿರಿಯ ವಿದ್ಯಾರ್ಥಿಗಳಾದ ಪ್ರೊ.ಬಿ. ಎ.ವಿವೇಕ ರೈ, ಶೀಲಾವತಿ ಕೊಳಂಬೆ ಮತ್ತಿತರ ಗಣ್ಯರು ತಮ್ಮ ಕಾಲದ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ ಇರುವ ಹಿರಿಯ ವಿದ್ಯಾರ್ಥಿಗಳು ಭಾಗವಹಿಸುವಂತೆ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಶಿವರಾಮ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನೆಲ-ಜಲ, ನಾಡಿನ ಶಿಕ್ಷಣ, ನಾಡುನುಡಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆ ಹುಟ್ಟುಹಾಕಲಾಗಿದೆ. ಕಳೆದ ವರ್ಷ ಸೆ.20ರಂದು ಒಕ್ಕೂಟಕ್ಕೆ ಚಾಲನೆ ದೊರೆತಿದ್ದು ಮೊದಲ ಸಮಾವೇಶ ಮಂಗಳಗಂಗೋತ್ರಿಯಲ್ಲಿ ಜರಗಿತ್ತು. ಈ ಸಂದರ್ಭ ಭಾಗವಹಿಸಿದ ಹಿರಿಯ ವಿದ್ಯಾರ್ಥಿಗಳು ಒಕ್ಕೂಟವನ್ನು ರಾಜ್ಯಮಟ್ಟದಲ್ಲಿ ರಚನಾತ್ಮಕವಾಗಿ ರೂಪಿಸಲು ಸಲಹೆ ನೀಡಿದ್ದರು. ಅದರಂತೆ 30 ಮಂದಿಯ ಅಡ್‌ಹಾಕ್ ಸಮಿತಿ ರಚಿಸಿ ಬೈಲಾ ರೂಪಿಸಲಾಗಿದೆ. ಶೀಘ್ರ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ, ಚಂದ್ರಕಲಾ ನಂದಾವರ, ವಾಸುದೇವ ಕೆ. ಉಪಸ್ಥಿತರಿದ್ದರು.