×
Ad

ಯೆನೆಪೊಯ ಸ್ಕೂಲ್ ವಿದ್ಯಾರ್ಥಿಗಳಿಗೆ ‘ವರ್ಬ್ಯಾಟಲ್-2016 ಪ್ರಶಸ್ತಿ’

Update: 2016-09-21 23:53 IST

ಮಂಗಳೂರು, ಸೆ.21: ನಗರದ ಯೆನೆಪೊಯ ಸ್ಕೂಲ್‌ನ ಮಾನಸ ಅಶ್ರಫ್ ಮತ್ತು ಆಝಮ್ ಇಬ್ರಾಹೀಂ ‘ವರ್ಬ್ಯಾಟಲ್ ಜೂನಿಯರ್ 2016’ರಲ್ಲಿ ವಿಜೇತರಾಗಿ 1 ಲಕ್ಷ ರೂ. ನಗದು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಯೆನೆಪೊಯ ಸ್ಕೂಲ್‌ನ ವಿದ್ಯಾರ್ಥಿಗಳು 2010ರಿಂದ ಈ ಸ್ಪರ್ಧೆಯಲ್ಲಿ(2010, 2013, 2014 ಹಾಗೂ 2015ರಲ್ಲಿ) ಪ್ರಶಸ್ತಿ ಗಳಿಸುತ್ತಾ ಬಂದಿದ್ದಾರೆ. ‘ವರ್ಬ್ಯಾಟಲ್ ಸ್ಪರ್ಧೆ’ಯಲ್ಲಿ ಈ ಬಾರಿ ಪ್ರತಿಸ್ಪರ್ಧಿಗಳನ್ನು ಪ್ರಜಾಪ್ರಭುತ್ವ ಮತ್ತು ನಾಗರಿಕವಾದ ರೀತಿಯಲ್ಲಿ ಗೌರವಿಸುವ ವಿಷಯವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕು ಎನ್ನುವ ನೆಲೆಯಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಸಾಧನೆಗೆ ಯೆನೆಪೊಯ ಸ್ಕೂಲ್‌ನ ಶಿಕ್ಷಕಿ ಮತ್ತು ವಿದ್ಯಾರ್ಥಿಗಳಿಗೆ ಮರಿಯಾ ಸುಸೈನಾಥನ್, ದಿವ್ಯಾ ಡಿಸೋಜ ಸಲಹೆಗಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News