×
Ad

ಕಾರ್ಪ್ ಬ್ಯಾಂಕ್‌ನಿಂದ ಭಾಷಾ ಸೌಹಾರ್ದತಾ ದಿನಾಚರಣೆ

Update: 2016-09-21 23:56 IST

ಮಂಗಳೂರು, ಸೆ.21: ಕಾರ್ಪೊರೇಶನ್ ಬ್ಯಾಂಕ್ ಮತ್ತು ನಗರ ಭಾಷಾ ಅನುಷ್ಠಾನ ಸಮಿತಿಯ ವತಿಯಿಂದ ಭಾಷಾ ಸೌಹಾರ್ದತಾ ದಿನವನ್ನು ಬುಧವಾರ ಬ್ಯಾಂಕಿನ ಕೇಂದ್ರ ಕಚೇರಿ ಯಲ್ಲಿ ಆಚರಿಸಲಾಯಿತು.
ಬ್ಯಾಂಕ್‌ನ ಅಧ್ಯಕ್ಷ ಹಾಗೂ ಸಿಇಒ ಜೈ ಕುಮಾರ್ ಗಾರ್ಗ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಸುನೀಲ್ ಮೆಹ್ತಾ, ಬಹುಭಾಷಾ ಸಂಸ್ಕೃತಿಯನ್ನು ಹೊಂದಿರುವ ಭಾರತ ದಲ್ಲಿ ಪ್ರತಿ ರಾಜ್ಯ, ಪ್ರದೇಶದ ಜನರು ವ್ಯವಹಾರಗಳಿಗೆ ತಮ್ಮ ಮಾತೃ ಭಾಷೆ ಯನ್ನು ಬಳಸುವ ಸ್ವಾತಂತ್ರ ಹೊಂದಿ ದ್ದಾರೆ. ಆದರೆ ದೇಶದ ಎಲ್ಲ ಜನರನ್ನು ಒಂದುಗೂಡಿಸಲು ಒಂದು ಭಾಷೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಹಿಂದಿ ಭಾಷೆಯನ್ನು ಹೆಚ್ಚು ಬಳಕೆ ಮಾಡಬೇಕಾಗಿದೆ. ಇದು ಸರಕಾರಿ ಆದೇಶಕ್ಕಿಂತ ಹೆಚ್ಚಾಗಿ ಜನರ ಮೂಲಕ ನಡೆಯಬೇಕಾಗಿದೆ ಎಂದರು.
ವೇದಿಕೆಯಲ್ಲಿ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಅಂಬರೀಶ್ ಕುಮಾರ್ ಸಿಂಗ್,ಮಹಾ ಪ್ರಬಂಧಕ ರಾಕೇಶ್ ಶ್ರೀವಾತ್ಸವ್ ಮೊದಲಾದವರು ಉಪ ಸ್ಥಿತರಿದ್ದರು.
ಭಾಷಾ ಸೌಹಾರ್ದತಾ ದಿನದ ಅಂಗವಾಗಿ ವಿವಿಧ ಸಂಸ್ಥೆಗಳ ಸಾಧಕರನ್ನು ಜೈ ಕುಮಾರ್ ಗಾರ್ಗ್ ಸ್ಮರಣಿಕೆ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News