ಭಾರತದ 500ನೆ ಟೆಸ್ಟ್: ವಿಸ್ಡನ್ ಸಾರ್ವಕಾಲಿಕ ಭಾರತ ಟೆಸ್ಟ್ ಇಲೆವೆನ್‌ಗೆ ಧೋನಿ ನಾಯಕ

Update: 2016-09-21 18:33 GMT

ಹೊಸದಿಲ್ಲಿ, ಸೆ.21: ಭಾರತ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಪ್ರತಿಷ್ಠಿತ ಕ್ರಿಕೆಟ್ ನಿಯತಕಾಲಿಕ ವಿಸ್ಡನ್ ಸಾರ್ವಕಾಲಿಕ ಭಾರತ ಟೆಸ್ಟ್ ಇಲೆವೆನ್ ತಂಡದ ನಾಯಕನಾಗಿ ಬುಧವಾರ ನೇಮಕಗೊಂಡಿದ್ದಾರೆ.

ಕಾನ್ಪುರದಲ್ಲಿ ಗುರುವಾರ ನ್ಯೂಝಿಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 500ನೆ ಟೆಸ್ಟ್ ಪಂದ್ಯ ಆಡುತ್ತಿರುವ ಹಿನ್ನೆಲೆಯಲ್ಲಿ ವಿಸ್ಡನ್ ಇಂಡಿಯಾ ಈ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಮಾಜಿ ಟೆಸ್ಟ್ ನಾಯಕ ಸುನೀಲ್ ಗವಾಸ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಆರಂಭಿಕ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ದ್ರಾವಿಡ್ 3ನೆ ಕ್ರಮಾಂಕದಲ್ಲಿದ್ದರೆ, ಆ ನಂತರ ತೆಂಡುಲ್ಕರ್ ಹಾಗೂ ಲಕ್ಷ್ಮಣ್ ಅವರಿದ್ದಾರೆ. ಇದೀಗ ಏಕದಿನ ಹಾಗೂ ಟ್ವೆಂಟಿ-20 ತಂಡದಲ್ಲಿ ಭಾರತದ ನಾಯಕನಾಗಿರುವ ಧೋನಿ, ಈ ವಿಶೇಷ ತಂಡದ ವಿಕೆಟ್‌ಕೀಪರ್ ಆಗಿದ್ದಾರೆ.

ಡ್ರೀಮ್ ಟೀಮ್‌ನಲ್ಲಿ ಭಾರತದ ವೇಗದ ದಂತಕತೆ ಕಪಿಲ್‌ದೇವ್‌ರಿದ್ದಾರೆ. ಮತ್ತೊಂದೆಡೆ, ಕ್ರಿಕೆಟ್ ಆಸ್ಟ್ರೇಲಿಯ 50,000 ಅಧಿಕ ಮತಗಳನ್ನು ಆಧರಿಸಿ ಭಾರತದ ಶ್ರೇಷ್ಠ ಇಲೆವೆನ್ ಆಯ್ಕೆ ಮಾಡಿದೆ.

ವಿಸ್ಡನ್ ಟೆಸ್ಟ್ ಇಲೆವೆನ್: ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿ.ವಿ.ಎಸ್. ಲಕ್ಷ್ಮಣ್, ಕಪಿಲ್‌ದೇವ್, ಎಂ.ಎಸ್.ಧೋನಿ(ನಾಯಕ, ವಿಕೆಟ್‌ಕೀಪರ್), ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಝಹೀರ್ ಖಾನ್, ಬಿಷನ್ ಸಿಂಗ್ ಬೇಡಿ, ಮುಹಮ್ಮದ್ ಅಝರುದ್ದೀನ್(12ನೆ ಆಟಗಾರ).

ಕ್ರಿಕೆಟ್ ಆಸ್ಟ್ರೇಲಿಯ ಇಂಡಿಯಾ ಇಲೆವೆನ್: ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಷ್ಮಣ್, ಸೌರವ್ ಗಂಗುಲಿ, ಎಂಎಸ್ ಧೋನಿ(ನಾಯಕ, ವಿ.ಕೀ.), ಕಪಿಲ್‌ದೇವ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಝಹೀರ್ ಖಾನ್.

ಭಾರತದ ಅತ್ಯಂತ ಯಶಸ್ವಿ ನಾಯಕರುಗಳು

ಹೆಸರು         ಪಂದ್ಯ   ಗೆಲುವು  ಸೋಲು ಡ್ರಾ

ಧೋನಿ         60      27       18       15

ಗಂಗುಲಿ        49      21       13       15

ಅಝರುದ್ದೀನ್  47       211       31       09

ಗವಾಸ್ಕರ್     47       09      08       30

ಎಂಎಕೆ ಪಟೌಡಿ40      09      19       12

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News