ಹಳೆಯ ನಿಯಮದಂತೆ ಕಾರ್ಯಾಚರಿಸಲು ಮಹಾರಾಷ್ಟ್ರದ 3 ಬಾರ್ ಗಳಿಗೆ ಸುಪ್ರೀಂ ಅನುಮತಿ
ಹೊಸದಿಲ್ಲಿ, ಸೆ.21: ಮಹಾರಾಷ್ಟ್ರದ 3 ಡ್ಯಾನ್ಸ್ ಬಾರ್‌ಗಳಿಗೆ, ಒಳಗೆ ಸಿಸಿಟಿವಿ ಇಲ್ಲದೆ ಕಾರ್ಯಾಚರಿಸಲು, ಮದ್ಯ ಪೂರೈಸಲು ಹಾಗೂ ಮಧ್ಯರಾತ್ರಿಯ ಬಳಿಕದ 1 ಗಂಟೆಯ ಬಳಿಕವೂ ತೆರೆದಿರಿಸಲು ಸುಪ್ರೀಂ ಕೋರ್ಟ್ ಇಂದು ಅನುಮತಿ ನೀಡಿದೆ.
ಬಾರ್‌ಗಳು ಹಳೆಯ ಕಾನೂನಿನನ್ವಯವೇ ಕಾರ್ಯಾಚರಿಸಬಹುದೆಂದು ಅವರು ಅದು ಹೇಳಿದೆ. ಹೊಸ ಕಠಿಣ ನಿಯಮಗಳನ್ನು ಪ್ರಶ್ನಿಸಿದ್ದ ಈ ಮೂರು ಬಾರ್‌ಗಳಿಗೆ ನಿಯಮಗಳನ್ನು ಸಡಿಲಗೊಳಿಸಿದ ಸುಪ್ರೀಂ ಕೋರ್ಟ್, ಡ್ಯಾನ್ಸ್ ನಡೆಯುವಲ್ಲಿ ಮದ್ಯ ಪೂರೈಕೆ ನಿಷೇಧಿಸುವುದು ಅಸಮರ್ಪಕ ಎಂದಿದೆ. ಯುವತಿಯರು ನೃತ್ಯ ಮಾಡುವ ಪ್ರದೇಶದಲ್ಲಿ ಮದ್ಯ ಪೂರೈಕೆಗೆ ಅವಕಾಶ ನೀಡಬಾರದು. ಕಿರುಕುಳದ ಮೇಲೆ ನಿಗಾ ಇಡಲು ಸಿಸಿಟಿವಿಗಳು ಕಡ್ಡಾಯವಾಗಿರಬೇಕು. ಇದರಿಂದ ಪೊಲೀಸ್ ಕ್ರಮ ಅಗತ್ಯವಾಗಬಹುದಾದ ಇತರ ಕ್ರಿಮಿನಲ್ ಚಟುವಟಿಕೆಗಳ ಮೇಲೂ ಕಣ್ಣಿಡಲು ಸಾಧ್ಯವಾಗುತ್ತದೆಂದು ಮಹಾರಾಷ್ಟ್ರ ಸರಕಾರ ವಾದಿಸಿತ್ತು. ಹಳೆ ನಿಯಮಗಳಂತೆ ಈ 3 ಬಾರ್‌ಗಳಿಗೆ ಕಾರ್ಯಾಚರಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ನ.24ಕ್ಕೆ ಮುಂದೂಡಿದೆ.