1.2 ಕೋಟಿ ಮೌಲ್ಯದ ಚಿನ್ನವನ್ನು ಈತ ಎಲ್ಲಿ ಅಡಗಿಸಿ ಸಾಗಿಸಿದ ಎಂದು ಊಹಿಸುವುದು ನಿಮಗೆ ಅಸಾಧ್ಯ!
ನ್ಯೂಯಾರ್ಕ್, ಸೆ. : ಸುಮಾರು 1.2 ಕೋಟಿ ಮೌಲ್ಯದ ಚಿನ್ನವನ್ನು ತನ್ನ ಗುದದ್ವಾರದಲ್ಲಿಟ್ಟು ಕಳ್ಳಸಾಗಣೆ ಮಾಡಿದ ಆರೋಪವನ್ನು ರಾಯಲ್ ಕೆನಡಿಯನ್ ಮಿಂಟ್ ಉದ್ಯೋಗಿಯೊಬ್ಬ ಎದುರಿಸುತ್ತಿದ್ದಾನೆೆ.
ಆರೋಪಿ ಲೆಸ್ಟರ್ ಲಾರೆನ್ಸ್ ಕೂಕೀ ಗಾತ್ರದ‘ಪಕ್ಸ್’ ಎಂದು ಕರೆಯಲ್ಪಡುವ ಚಿನ್ನದತುಂಡುಗಳನ್ನು ಮಿಂಟ್ ನಿಂದ ಕಳವು ಮಾಡಿ ಅವುಗಳನ್ನು ಚಿನ್ನದ ಖರೀದಿದಾರರೊಬ್ಬರಿಗೆ ಮಾರಾಟ ಮಾಡಿದ್ದಾನೆಂದು ಹೇಳಲಾಗುತ್ತಿದೆ. ಈ ಚಿನ್ನ ಮಾರಾಟದಿಂದ ಆತ ಕೆಲವೇ ತಿಂಗಳುಗಳಲ್ಲಿ 1.2 ಕೋಟಿಯಷ್ಟು ಹಣ ಕೊಳ್ಳೆ ಹೊಡೆದಿದ್ದನೆಂದು ಹೇಳಲಾಗಿದೆ. ಆಶ್ಚರ್ಯವೆಂದರೆ ಆತ ಈ ಹಣವನ್ನುಬ್ಯಾಂಕೊಂದರಲ್ಲಿ ಠೇವಣಿಯಿರಿಸಿದಾಗ ಆತ ಮಿಂಟ್ ನಲ್ಲಿ ಕೆಲಸ ಮಾಡುವವನೆಂದು ತಿಳಿದಾಗಅಲ್ಲಿನ ಹಲವು ಸಿಬ್ಬಂದಿಆತನನ್ನು ಸಂಶಯದಿಂದ ನೋಡಿದ್ದರು.
ಲಾರೆನ್ಸ್ ಮಾರಾಟ ಮಾಡಿದ ಪಕ್ಸ್ ಗಳನ್ನು ಪ್ರಾಸಿಕ್ಯೂಶನ್ ನಿಖರವಾಗಿ ಗುರುತಿಸಲು ಸಾಧ್ಯವಾಗದೇ ಇದ್ದರೂ ಅವುಗಳು ಮಿಂಟ್ ಉಪಯೋಗಿಸುವ ಅಚ್ಚುಗಳಿಗೆ ತಾಳೆಯಾಗುತ್ತಿವೆ ಎಂದು ಹೇಳಲಾಗಿದೆ. ಆತ ಈ ಚಿನ್ನದ ತುಂಡುಗಳನ್ನು ಹೇಗೆ ಕಳ್ಳ ಸಾಗಾಟ ಮಾಡುತ್ತಿದ್ದಾನೆಂದು ತಿಳಿಯ ಹೊರಾಗ ಆತನ ಕಚೇರಿ ಲಾಕರ್ ನಲ್ಲಿಆತ ಇಟ್ಟಿದ್ದ ವ್ಯಾಸಲೀನ್ ಪತ್ತೆಯಾಗಿತ್ತು. ಇದನ್ನು ಗುದದ್ವಾರಕ್ಕೆ ಹಚ್ಚಿ ನಂತರ ಸುಲಭವಾಗಿ ಚಿನ್ನವನ್ನು ಅಲ್ಲಿಟ್ಟು ಸಾಗಿಸುತ್ತಿದ್ದನೆನ್ನಲಾಗಿದೆ.
ಲಾರೆನ್ಸ್ ಕಚೇರಿಯಲ್ಲಿ ಹಲವಾರು ಬಾರಿ ಮೆಟಲ್ ಡಿಟೆಕ್ಟರ್ ಮುಖಾಂತರವೇ ಹಾದು ಹೋಗಿದ್ದರೂ ಯಾವತ್ತೂಆತ ಸಿಕ್ಕಿ ಬಿದ್ದಿರಲಿಲ್ಲವೆಂದು ತಿಳಿದು ಬಂದಿದೆ. ಇದನ್ನು ಪರೀಕ್ಷಿಸಲು ಅಲ್ಲಿನ ಸುರಕ್ಷಾ ಸಿಬ್ಬಂದಿಯೊಬ್ಬರು ಅದೇ ರೀತಿ ಚಿನ್ನವನ್ನು ಅಡಗಿಸಿ ಮೆಟಲ್ ಡಿಟೆಕ್ಟರ್ ಮುಖಾಂತರ ಹಾದು ಹೋಗಿದ್ದಾರೆಂದು ಹೇಳಲಾಗಿದೆ.
ಆದರೆ ಇಲ್ಲಿಯವರೆಗೂ ಲಾರೆನ್ಸ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ನವೆಂಬರ್ ತಿಂಗಳ ತನಕ ಕಾಯಬೇಕಾದೀತೆಂದು ಹೇಳಲಾಗುತ್ತಿದೆ. ಅತ್ತ ಆತನ ವಕೀಲರ ಪ್ರಕಾರ ತನ್ನ ಚಿನ್ನ ಕಳೆದು ಹೋಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಮಿಂಟ್ ಇನ್ನಷ್ಟೇ ದೃಢಪಡಿಸಬೇಕಿದೆ.