ಫೋರ್ಬ್ಸ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಭಾರತದ ನಂ.1 ಶ್ರೀಮಂತ

Update: 2016-09-22 11:32 GMT

ಸಿಂಗಾಪುರ, ಸೆ.22: ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಭಾರತದ ನಂ.1 ಶ್ರೀಮಂತ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.

ಅಂಬಾನಿಯ ಒಟ್ಟು ನಿವ್ವಳ ಮೌಲ್ಯ 22.7 ಬಿಲಿಯನ್ ಯುಎಸ್ ಡಾಲರ್. ಅಂಬಾನಿಯ ಆಸ್ತಿ-ಪಾಸ್ತಿ ಕಳೆದ ವರ್ಷಕ್ಕಿಂತ 18.9 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಆರ್‌ಐಎಲ್ ಷೇರು ಕಳೆದ 12ತಿಂಗಳಲ್ಲಿ ಶೇ.21ರಷ್ಟು ಹೆಚ್ಚಾಗಿದೆ. ರಿಲಯನ್ಸ್ ಕಂಪೆನಿ ಸೆಪ್ಟಂಬರ್‌ನಲ್ಲಿ ಜಿಯೋ 4ಜಿ ಸೇವೆ ಆರಂಭಿಸಿದ ಬಳಿಕ ಭಾರತದಲ್ಲಿ ಟೆಲಿಕಮ್ಯುನಿಕೇಶನ್ ಮಾರುಕಟ್ಟೆ ಭಾರೀ ಸ್ಪರ್ಧೆ ಏರ್ಪಟ್ಟಿದೆ.

 ಭಾರತದ ಶ್ರೀಮಂತ ಔಷಧಿ ಉದ್ಯಮಿ ದಿಲಿಪ್ ಶಾಂಘ್ವಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ 2ನೆ ಸ್ಥಾನ ಉಳಿಸಿಕೊಂಡಿದ್ದಾರೆ. ಅವರು ಒಟ್ಟು ನಿವ್ವಳ ಮೌಲ್ಯ 16.9 ಬಿಲಿಯನ್ ಯುಎಸ್ ಡಾಲರ್. ಹಿಂದೂಜಾ ಬ್ರದರ್ಸ್(15.5 ಬಿ.ಡಾ.) ಹಾಗೂ ವಿಪ್ರೊ ಸಂಸ್ಥೆಯ ಮುಖ್ಯಸ್ಥ ಅಝೀಂ ಪ್ರೇಮ್‌ಜಿ(15 ಬಿಲಿಯನ್ ಡಾಲರ್) ಕ್ರಮವಾಗಿ 3ನೆ ಹಾಗೂ 4ನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News