ಉಡುಪಿಯಲ್ಲಿ ಮರಳುಗಾರಿಕೆ ನಿಷೇಧದ ವಿರುದ್ಧ ಪ್ರತಿಭಟನಾ ರ್ಯಾಲಿ
ಉಡುಪಿ, ಸೆ.22: ಜಿಲ್ಲೆಯಲ್ಲಿ ಮರಳುಗಾರಿಕೆ ಅವಕಾಶ ನೀಡುವಂತೆ ಆಗ್ರಹಿಸಿ ಸರ್ವ ಸಂಘಟನೆಗಳ ಮರಳು ಹೋರಾಟ ಸಂಚಾಲನ ಸಮಿತಿಯ ನೇತೃತ್ವದಲ್ಲಿಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ಜೋಡುಕಟ್ಟೆಯಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಪ್ತಿಗೊಂಡಿತು. ರ್ಯಾಲಿಯಲ್ಲಿ 33 ವಿವಿಧ ಸಂಘಟನೆಗಳ 3 ಸಾವಿರಕ್ಕೂ ಅಧಿಕ ಮಂದಿ ಪಕ್ಷ, ಬೇಧ ಮರೆತು ಭಾಗವಹಿಸಿದ್ದರು.
ಧರಣಿಗೆ ಬೆಂಬಲ ಸೂಚಿಸಿದ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೂಡಾ ಪಾಲ್ಗೊಂಡಿದ್ದರು.
ಕಳೆದ ಹಲವು ತಿಂಗಳಿನಿಂದ ಮರಳುಗಾರಿಕೆಗೆ ಉಡುಪಿಯಲ್ಲಿ ನಿಷೇಧವಿದೆ.
ಮರಳುಗಾರಿಕೆ ಸಂಬಂಧಿಸಿ ವ್ಯಕ್ತಿಯೋರ್ವರು ಹೈಕೋಟ್‌ನಲ್ಲಿ ದಾವೆ ಹೂಡಿರುವ ಕಾರಣ ಕಳೆದ ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ಇದರಿಂದ ಮರಳಿನ ಅಭಾವ ಉಂಟಾಗಿದ್ದು, ನಾಗರಿಕರು, ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಮರಳುಗಾರಿಕೆಗೆ ಕೂಡಲೇ ಅವಕಾಶ ಕಲ್ಪಿಸುವಂತೆ ಧರಣಿನಿರತರು ಆಗ್ರಹಿಸಿದರು.