ಬಿಲಾಲ್ ಮಸೀದಿ:ಪದಾಧಿಕಾರಿಗಳ ಆಯ್ಕೆ
Update: 2016-09-22 15:48 IST
ಮಂಗಳೂರು, ಸೆ. 21: ತಲಪಾಡಿಯ ಕಡಮೊಗರು ಬಿಲಾಲ್ ಜುಮಾ ಮಸೀದಿ ಸಮಿತಿಯ ಮಹಾಸಭೆಯು ಇತ್ತೀಚೆಗೆ ದ.ಕ. ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಉಪಾಧ್ಯಕ್ಷ ಎಸ್.ಅಬೂಬಕರ್ ಸಜಿಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಸೀದಿಯ ಅಧ್ಯಕ್ಷರಾಗಿ ಎಂ. ಅಬ್ಬಾಸ್ ತಲಪಾಡಿ, ಉಪಾಧ್ಯಕ್ಷರಾಗಿ ಯಾಕೂಬ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದೀಕ್ ಟಿ., ಜೊತೆ ಕಾರ್ಯದರ್ಶಿಗಳಾಗಿ ಇಬ್ರಾಹೀಂ ತಸ್ಲೀಂ, ಅನ್ವರ್ ಸಾದಾತ್ ಬಿ.ಎ., ಕೋಶಾಧಿಕಾರಿಯಾಗಿ ಬಿ.ಎಸ್.ಮೊಯ್ದಿನ್, ಸಮಿತಿ ಸದಸ್ಯರಾಗಿ ಮೊಯ್ದಿನ್ ಕುಟ್ಟಿ, ಕೊಳಂಗರೆ ನಿಯಾಝ್, ಬಶೀರ್ ಕೊಳಂಗರೆ, ಹಕೀಂ, ಅಬ್ದುಲ್ಲ ಆಯ್ಕೆಯಾದರು. ಖತೀಬ್ ಎಂ.ಎಸ್.ಎಂ.ಝೈನಿ ಕಾಮಿಲ್ ಮಾತನಾಡಿ ದರು. ಇಮಾಮ್ ಇಬ್ರಾಹೀಂ ಮದನಿ ದುಆ ನೆರವೇರಿಸಿದರು. ವಕ್ಫ್ ಬೋರ್ಡ್ ಪ್ರತಿನಿಧಿಗಳಾದ ಮೊಯ್ದಿನ್ ಅಲ್ ಸಫರ್, ಅಬ್ದುಲ್ ಕುಪ್ಪೆಪದವು ಉಪಸ್ಥಿತರಿದ್ದರು. ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ ಸ್ವಾಗತಿಸಿದರು.