ಬೋಟ್‌ನಿಂದ ಬಿದ್ದು ಮೃತ್ಯು
Update: 2016-09-22 21:03 IST
ಗಂಗೊಳ್ಳಿ, ಸೆ.22: ಗಂಗೊಳ್ಳಿ ಬಂದರಿನಲ್ಲಿ ನಿಲ್ಲಿಸಲಾದ ಬೋಟಿನಲ್ಲಿ ಬಲೆ ತೊಳೆಯುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಪ್ಪಳ ತಾಲೂಕಿನ ಮರಿಯಪ್ಪ(45) ಎಂದು ಗುರುತಿಸ ಲಾಗಿದೆ. ಗಂಗೊಳ್ಳಿಯ ಶ್ರೀನಾರಾಯಣ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ಸೆ.21ರಂದು ಅಪರಾಹ್ನ ಬೋಟಿನಲ್ಲಿ ಬಲೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಅಳಿವೆಯಲ್ಲಿ ಪಂಚಗಂಗಾ ವಳಿ ಹೊಳೆಗೆ ಬಿದ್ದರು. ಕೂಡಲೇ ಅವರನ್ನು ಮೇಲಕ್ಕೆತ್ತಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟರು.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.