48 ಗಂಟೆಯೊಳಗೆ ಭಾರತ ತೊರೆಯಿರಿ: ಪಾಕ್ ಕಲಾವಿದರಿಗೆ ರಾಜ್ ಠಾಕ್ರೆ ಬೆದರಿಕೆ
ಮುಂಬೈ,ಸೆಪ್ಟಂಬರ್ 23: ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ಈ ನಡುವೆ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಅಧ್ಯಕ್ಷ ರಾಜ್‌ಠಾಕ್ರೆ ಪಾಕಿಸ್ತಾನಿ ನಟನಟಿಯರು, ಕಲಾಕಾರರು ಭಾರತ್ ತೊರೆದು ಹೋಗಬೇಕೆಂದು ಬೆದರಿಕೆಹಾಕಿದ್ದಾರೆ. ಬಾಲಿವುಡ್‌ನಲ್ಲಿ ಕೆಲಸ ನಿರತ ಎಲ್ಲ ಪಾಕಿಸ್ತಾನಿ ಕಲಾಕಾರರು ಭಾರತವನ್ನು ತೊರೆಯಬೇಕೆಂದು ಅವರು ಅದೇಶಿಸಿದ್ದಾರೆ.
ಹೋಗದಿದ್ದರೆ ಒದ್ದು ಹೊರಹಾಕಲಾಗುವುದು:
ಇದೇ ವೇಳೆಎಮ್‌ಎನ್‌ಎಸ್‌ನ ಚಿತ್ರಪಟ್ ಸೇನಾ(ಸಿನೆಮಾಕ್ಕೆಸಂಬಂಧಿಸಿದ ಘಟಕ)ದ ಅಮಿಯ ಖೋಪ್‌ಕರ್ ತೀವ್ರ ಆಕ್ರಮಣಕಾರಿ ಎಚ್ಚರಿಕೆ ನೀಡಿದ್ದು, "ಮುಂದಿನ 48 ಗಂಟೆಗಳೊಳಗೆ ಎಲ್ಲ ಪಾಕಿಸ್ತಾನಿ ಕಲಾಕಾರರು ಭಾರತವನ್ನು ಬಿಟ್ಟು ಹೋಗಬೇಕು. ಇಲ್ಲವಾದರೆ ನಾವು ಒದ್ದು ಹೊರಹಾಕುತ್ತೇವೆ" ಎಂದು ಬೆದರಿಕೆಹಾಕಿದ್ದಾರೆ. ಆದರೆ ಎಮ್‌ಎನ್‌ಎಸ್ ಅಥವಾ ಶಿವಸೇನೆ ಪಾಕಿಸ್ತಾನಿ ಆರ್ಟಿಸ್ಟ್‌ಗಳಿಗೆ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪಾಕಿಸ್ತಾನಿಗಝಲ್ ಗಾಯಕ ಮೆಹಂದಿ ಹಸನ್‌ರಿಗೆ ಅವರ ಕಾರ್ಯಕ್ರಮವನ್ನೇ ರದ್ದುಪಡಿಸಬೇಕೆಂದು ಶಿವಸೇನೆ ಬೆದರಿಕೆಹಾಕಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ ಎಂದು ವರದಿ ತಿಳಿಸಿದೆ.