ಸರಕಳ್ಳಿಗೆ ಒಂದು ಲಕ್ಷ ರೂ. ಕಟ್ಟಿ ಜಾಮೀನು!
Update: 2016-09-23 14:03 IST
ಚೆರ್ಕಲ, ಸೆ.23: ಬಸ್ ಹತ್ತುವಾಗ ಮಹಿಳೆಯ ಕರಿಮಣಿ ಸೆಳೆದ ಪ್ರಕರಣದ ಆರೋಪಿಯಾದ ಅಲೆಮಾರಿ ಜನಾಂಗದ ಮಹಿಳೆಯೊಬ್ಬಳಿಗೆ ಒಂದು ಲಕ್ಷ ರೂಪಾಯಿ ಕಟ್ಟುವ ಮೂಲಕ ಕೋರ್ಟಿನಲ್ಲಿ ಜಾಮೀನು ದೊರಕಿದೆ ಎಂದು ವರದಿಯಾಗಿದೆ. ಕೋಯಂಬತ್ತೂರು ಉಕ್ಕಡಂ ನಾಲಗತ್ತೆರುವಿನ ಮಾರಿಮುತ್ತು(38)ಗೆ ಕಾಸರಗೋಡು ಸಿಜೆಎಂ ಕೋರ್ಟು ಒಂದು ಲಕ್ಷ ರೂಪಾಯಿ ಬಾಂಡ್‌ನಲ್ಲಿ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಮಂಗಳವಾರ ಮಹಿಳೆಗೆ ರಿಮಾಂಡ್ ವಿಧಿಸಲಾಗಿತ್ತು. ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಎರ್ನಾಕುಲಂನಿಂದ ಒಬ್ಬ ವಕೀಲರು ಬಂದಿದ್ದು ಅವರ ನೇತೃತ್ವದಲ್ಲಿ ಗುರುವಾರ ಒಂದು ಲಕ್ಷ ರೂಪಾಯಿ ಕೋರ್ಟಿಗೆ ಕಟ್ಟುವ ಮೂಲಕ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು ಎಂದು ವರದಿ ತಿಳಿಸಿದೆ.