ವಿಮಾನ ಮಿಸ್ ಆದರೆ ಇವರು ಮಾಡಿದಂತೆ ಈವರೆಗೆ ಯಾರೂ ಮಾಡಿರಲಾರರು !
ವಿಮಾನ ಹಿಡಿಯಲು ಎಂದಾದರೂ ತಡವಾಗಿ ಹೋಗಿದ್ದೀರಾ? ಅಂತಿಮ ಬೋರ್ಡಿಂಗ್ ಕರೆ ಮಿಸ್ ಆದ ಮೇಲೆ ನಿಮ್ಮ ಸೀಟಿಗೆ ಟೆಲಿಪೋರ್ಟ್ ಆಗಿದ್ದುಂಟೇ? ಬೋರ್ಡ್ ಆಗುವ ಸಾಧ್ಯತೆಯೇ ಇಲ್ಲ ಎಂದು ವಿಮಾನ ನಿಲ್ದಾಣದ ಪರಿಚಾರಕರು ತಲೆ ಆಡಿಸಿದಾಗ ಹತಾಶೆಯಲ್ಲಿ ನಿಂತದ್ದಿದೆಯೇ? ಆದರೆ ಈ ಚೀನಾದ ದಂಪತಿ ವಿಮಾನ ನಿಲ್ದಾಣದ ಅಧಿಕಾರಿಗಳು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಕೇಳಲು ಸಿದ್ಧವೇ ಇರಲಿಲ್ಲ. ವಿಮಾನವನ್ನು ತಡೆಯಲು ಅವರು ಒತ್ತಡಪೂರ್ವಕ ರನ್‌ವೇಯಲ್ಲಿ ಓಡಿದರು!
ದಂಪತಿ ಬೀಜಿಂಗ್ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದಾಗ ಗೇಟು ಬಂದ್ ಆಗಿತ್ತು. ಅವರು ಒಂದು ಕೈಯಲ್ಲಿ ಲಗೇಜ್ ಹಿಡಿದು ನೇರ ವಿಮಾನ ಏರುವ ರಸ್ತೆಗೇ ಓಡಿದರು. ಪತ್ನಿ ವಿಮಾನದ ಚಕ್ರದ ಮುಂದೆಯೇ ಓಡಿ ಅದು ಹಾರುವುದನ್ನು ತಡೆಯುವ ಪ್ರಯತ್ನ ಮಾಡಿದರು. "ಇಬ್ಬರು ಪೊಲೀಸರು ಮಹಿಳೆಯನ್ನು ಹಿಡಿಯಲು ಪ್ರಯತ್ನಿಸಿದಾಗ ಆಕೆ ಭಾವನಾತ್ಮಕವಾಗಿ ತನ್ನ ಕೈಗಳನ್ನು ಎತ್ತುತ್ತಾ ಅಳಲು ಆರಂಭಿಸಿದರು" ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಏರ್ ಚೈನಾ ಟಿಕೆಟುಗಳು ಎಲ್ಲಾ ಅಗತ್ಯ ವಿಮಾನದ ಮಾಹಿತಿಗಳನ್ನು ಹೊಂದಿರುತ್ತದೆಯಾಗಿದ್ದರೂ, ದಂಪತಿ ತಮ್ಮ ಟಿಕೆಟಿನಲ್ಲಿ ಬೋರ್ಡಿಂಗ್ ಸಮಯವನ್ನು ಸ್ಪಷ್ಟವಾಗಿ ಬರೆದಿರಲಿಲ್ಲ ಎಂದು ಆರೋಪಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಂಧಿಸುವವರೆಗೂ ಅವರು ರನ್‌ವೇನಿಂದ ಹೊರ ಹೋಗಲು ಒಪ್ಪಲಿಲ್ಲ. ದಂಪತಿ ಈ ನಡವಳಿಕೆಯಿಂದ ಅವರಿಗೆ ವಿಮಾನ ಪ್ರಯಾಣ ನಿಷೇಧವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಕೃಪೆ: http://khaleejtimes.com/