‘ಪ್ರೇತಂಭಟ್ರ್ ನಿಂತಿಲ್ಲೆರ್’ ತುಳು ಮತ್ತು ಕನ್ನಡ ಕಾದಂಬರಿ ಬಿಡುಗಡೆ
ಮಂಗಳೂರು, ಸೆ.23: ಪ್ರೊ. ಕೆ.ಇ ರಾಧಾಕೃಷ್ಣರ ‘ಪ್ರೇತಂಭಟ್ರ್ ನಿಂತಿಲ್ಲೆರ್’ ತುಳು ಮತ್ತು ಕನ್ನಡ ಕಾದಂಬರಿಗಳನ್ನು ಹಂಪಿ ವಿಶ್ವವಿದ್ಯಾನಿಲಯ ದ ವಿಶ್ರಾಂತ ಕುಲಪತಿ ಬಿ. ಎ. ವಿವೇಕ ರೈ ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ಜಾತಿ ವಿಚಾರದ ಬಗ್ಗೆ ಬರೆಯುವುದು ತುಂಬಾ ಸೂಕ್ಷ್ಮ ವಿಚಾರ. ಆದರೆ ಕಾರಂತರು, ಕುವೆಂಪು ಅವರು ತಮ್ಮ ಜಾತಿಯ ಬಗ್ಗೆ ವಿಮರ್ಶಿಸುತ್ತಿದ್ದರು ಎಂದರು. ಪ್ರೇತ ಭೋಜನ ಎಂಬ ರೂಪಕವನ್ನಿಟ್ಟುಕೊಂಡು ಬ್ರಾಹ್ಮಣ ಸಮಯದಾಯದ ಒಳಗಿರುವ ಎಲ್ಲಾ ಧ್ವನಿಗಳನ್ನು ದಾಖಲಿಸುವ ಪ್ರಯತ್ನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಎ.ವಿ.ನಾವಡ, ಲೇಖಕ ಪ್ರೊ. ಕೆ.ಇ.ರಾಧಾಕೃಷ್ಣನ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ವಿ.ವಿ. ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ್ ಇರ್ವತ್ತೂರು, ವಿ.ವಿ.ಕಾಲೇಜು ಕನ್ನಡ ಸಂಘ ಅಧ್ಯಕ್ಷ ಡಾ.ರತ್ನಾವತಿ ಟಿ. ಉಪಸ್ಥಿತರಿದ್ದರು. ಪ್ರಕಾಶಕ ನಾಗೇಶ್ ಕಲ್ಲೂರು ಸ್ವಾಗತಿಸಿದರು.