×
Ad

ಕಾವೇರಿ ರಾದ್ಧಾಂತಕ್ಕೆ ರಾಜ್ಯ ಸರಕಾರವೇ ಕಾರಣ: ಕೇಂದ್ರ ಸಚಿವ ರಮೇಶ್ ಜಿಗಜಿಣಗಿ

Update: 2016-09-23 17:17 IST

ಮಂಗಳೂರು, ಸೆ.23: ಕಾವೇರಿ ರಾದ್ಧಾಂತಕ್ಕೆ ರಾಜ್ಯ ಸರಕಾರವೇ ಕಾರಣ ಎಂದು ಕೇಂದ್ರ ನೀರಾವರಿ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರ ತನ್ನ ಅಫಿದವಿತ್‌ನಲ್ಲೇ ಎಡವಟ್ಟು ಮಾಡಿತ್ತು. ಹತ್ತು ಟಿಎಂಸಿ ನೀರು ಬಿಡುವುದಾಗಿ ಸರಕಾರವೇ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್ 15 ಟಿಎಂಸಿ ನೀರು ಬಿಡುವಂತೆ ಹೇಳಿತ್ತು. ಈ ಅಫಿದವಿತ್‌ನಿಂದಾಗಿಯೇ ಸರಕಾರ ಈಗ ಇಕ್ಕಟ್ಟಿಗೆ ಸಿಲುಕಿದೆ ಎಂದರು.

ರಾಜ್ಯ ಬಿಜೆಪಿಯು ತಮಿಳುನಾಡಿಗೆ ನೀರು ಬಿಡದಿರುವಂತೆ ತನ್ನ ನಿಲುವನ್ನು ಈಗಾಗಲೇ ವ್ಯಕ್ತಪಡಿಸಿದೆ. ಅದಾಗ್ಯೂ ಸರಕಾರ ನಡೆಸುವ ವಿಶೇಷ ಅಧಿವೇಶನದಲ್ಲಿ ರಾಜ್ಯ ಸರಕಾರ ಕೈಗೊಳ್ಳುವ ತೀರ್ಮಾನಕ್ಕೆ ಬಿಜೆಪಿ ಬದ್ಧ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News