ಕುಸ್ತಿ ಪಂದ್ಯ: ಬ್ಯಾರೀಸ್ ಪಿಯು ಕಾಲೇಜಿನ ವಿದ್ಯಾರ್ಥಿ ಅಥಾವುಲ್ಲಾ ತೃತೀಯ
Update: 2016-09-23 17:42 IST
ಕುಂದಾಪುರ, ಸೆ.23: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಹಾಗೂ ಭಂಡಾರ್ಕರ್ಸ್ ಪಿಯು ಕಾಲೇಜು ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಕುಸ್ತಿ ಪಂದ್ಯಾಟದಲ್ಲಿ ಬ್ಯಾರೀಸ್ ಕೋಡಿ ಪಿಯು ಕಾಲೇಜಿನ ಅಥಾವುಲ್ಲಾ 42 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಿತೇಶ್ ಶೆಟ್ಟಿ ತರಬೇತಿ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.