×
Ad

ಮೊದಲ ಟೆಸ್ಟ್:ಎರಡನೆ ದಿನದಾಟಕ್ಕೆ ಮಳೆ ಅಡ್ಡಿ

Update: 2016-09-23 20:58 IST

ಕಾನ್ಪುರ, ಸೆ.23 : ಭಾರತದ ಐನೂರನೆ ಟೆಸ್ಟ್ ಎನಿಸಿಕೊಂಡಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೆ ದಿನ ಆಟಕ್ಕೆ ಮಳೆ ಅಡ್ಡಿಪಡಿಸಿದ್ದು, ನ್ಯೂಝಿಲೆಂಡ್ ಉತ್ತಮ ಆರಂಭ ಪಡೆದಿದೆ.
  ಇಲ್ಲಿನ ಗ್ರೀನ್‌ಪಾರ್ಕ್‌ನಲ್ಲಿ ಮಳೆಯಿಂದಾಗಿ ಆಟ ನಿಂತಾಗ ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 47 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸಿದ್ದು, ಸುಭದ್ರ ಸ್ಥಿತಿಯಲ್ಲಿದೆ.
 ಆರಂಭಿಕ ದಾಂಡಿಗ ಟಾಮ್ ಲ್ಯಾಥಮ್ ಮತ್ತು ನಾಯಕ ಕೇನ್ ವಿಲಿಯಮ್ಸ್ ಭಾರತದ ಸವಾಲಿಗೆ ದಿಟ್ಟ ಉತ್ತರ ನೀಡಿದ್ದಾರೆ. ಭಾರತದ ದಾಖಲಿಸಿದ ಮೊತ್ತವನ್ನು ಸರಿಗಟ್ಟಲು ಇನ್ನೂ 166 ರನ್ ಗಳಿಸಬೇಕಾಗಿದೆ.
ನಾಯಕ ವಿಲಿಯಮ್ಸನ್ ಔಟಾಗದೆ 65 ರನ್(115ಎ, 7ಬೌ) ಮತ್ತು ಲ್ಯಾಥಮ್ ಔಟಾಗದೆ 56 ರನ್(137ಎ, 5ಬೌ) ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಟೀ ವಿರಾಮದ ಬಳಿಕ ನ್ಯೂಝಿಲೆಂಡ್‌ನ ಆಟಕ್ಕೆ ಮಳೆ ಅಡ್ಡಿಪಡಿಸಿತು. ಇಂದು 54 ಓವರ್‌ಗಳ ಆಟ ಸಾಧ್ಯವಾಯಿತು.
ನ್ಯೂಝಿಲೆಂಡ್‌ನ ಇನಿಂಗ್ಸ್ ಆರಂಭಿಸಿದ ಮಾರ್ಟಿನ್ ಗಪ್ಟಿಲ್ ಮತ್ತು ಲ್ಯಾಥಮ್ ಮೊದಲ ವಿಕೆಟ್‌ಗೆ 35 ರನ್ ಸೇರಿಸಿ ದರು. 9.3 ಓವರ್‌ನಲ್ಲಿ ಉಮೇಶ್ ಯಾದವ್ ಅವರು ಗಪ್ಟಿಲ್ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. 31 ಎಸೆತಗಳನ್ನು ಎದುರಿಸಿದ ಗಪ್ಟಿಲ್ 3 ಬೌಂಡರಿಗಳ ಸಹಾಯದಿಂದ 21 ರನ್ ಗಳಿಸಿದರು.

ಎಡಗೈ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಝಿಲೆಂಡ್ ದಾಂಡಿಗರನ್ನು ಕಾಡಿದ್ದರೂ, ನಾಯಕ ವಿಲಿಯಮ್ಸನ್ ಮತ್ತು ಲ್ಯಾಥಮ್ ಎರಡನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 117 ರನ್ ಸೇರಿಸಿದರು.
36.4ನೆ ಓವರ್‌ನಲ್ಲಿ ಜಡೇಜ ಎಸೆತದಲ್ಲಿ ಲ್ಯಾಥಮ್ ಬಾರಿಸಿದ ಚೆಂಡು ಶಾರ್ಟ್‌ಲೆಗ್‌ನಲ್ಲಿದ್ದ ಲೋಕೇಶ್ ರಾಹುಲ್ ಕೈ ಸೇರಿತ್ತು. ಆದರೆ ರಾಹುಲ್ ಕ್ಯಾಚ್ ತೆಗೆದುಕೊಳ್ಳುವ ಮುನ್ನ ಅವರ ಹೆಲ್ಮೆಟ್‌ನ ಗ್ರಿಲ್‌ಗೆ  ಚೆಂಡು ಬಡಿದಿತ್ತು. ಇದರಿಂದಾಗಿ ಲ್ಯಾಥಮ್ ಜೀವದಾನ ಪಡೆದರು.
 
  31.4ನೆ ಓವರ್‌ನಲ್ಲಿ ವಿಲಿಯಮ್ಸನ್ ಇದೇ ರೀತಿ ಔಟಾಗುವ ಅವಕಾಶದಿಂದ ಪಾರಾಗಿದ್ದರು. ಅಶ್ವಿನ್ ಎಸೆತದಲ್ಲಿ ಚೆಂಡು ಅವರ ಹೆಲ್ಮೆಟ್‌ಗೆ ಬಡಿದು ಹಿಂದಕ್ಕೆ ಹಾರಿ ಸ್ಟಂಪ್‌ಗೆ ಬಡಿದರೂ ಬೇಲ್ಸ್ ಬೀಳದ ಹಿನ್ನೆಲೆಯಲ್ಲಿ ವಿಲಿಯಮ್ಸನ್‌ಗೆ ಜೀವದಾನ ಸಿಕ್ಕಿತು. ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 291 ರನ್ ಗಳಿಸಿದ್ದ ಭಾರತ ಈ ಮೊತ್ತಕ್ಕೆ ಇಂದು 27 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು.
   ರವೀಂದ್ರ ಜಡೇಜ ಅಜೇಯ 42 ರನ್(44ಎ, 7ಬೌ,1ಸಿ) ಗಳಿಸಿದರು. ಉಮೇಶ್ ಯಾದವ್ 9 ರನ್ ಗಳಿಸಿ ವ್ಯಾಗ್ನೆರ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ದಿನ ಆಟ ನಿಂತಾಗ ಆಲ್‌ರೌಂಡರ್ ರವೀಂದ್ರ ಜಡೇಜ 16ರನ್ ಮತ್ತು ಉಮೇಶ್ ಯಾದವ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಜಡೇಜ ಮತ್ತು ಯಾದವ್ ಅಂತಿಮ ವಿಕೆಟ್‌ಗೆ 41 ರನ್ ಸೇರಿಸಿದ ಫಲವಾಗಿ ತಂಡದ ಸ್ಕೋರ್ 97 ಓವರ್‌ಗಳಲ್ಲಿ 318ಕ್ಕೆ ತಲುಪಿತು.
ಬೌಲ್ಟ್ 67ಕ್ಕೆ 3, ಸ್ಯಾಂಟ್ನೆರ್ 94ಕ್ಕೆ 3, ವ್ಯಾಗ್ನೆರ್ 42ಕ್ಕೆ 2, ಕ್ರೇಗ್ ಮತ್ತು ಸೋಧಿ ತಲಾ ಒಂದು ವಿಕೆಟ್ ಹಂಚಿಕೊಂಡರು.

ಹೈಲೈಟ್ಸ್-

*11: ಲ್ಯಾಥಮ್ 11ನೆ ಅರ್ಧಶತಕ
*2: ನ್ಯೂಝಿಲೆಂಡ್‌ನ ಇಬ್ಬರು ಆಟಗಾರರು ವಿದೇಶದಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದಾರೆ.
*6: ಲ್ಯಾಥಮ್ ಮತ್ತು ವಿಲಿಯಮ್ಸನ್ ಕಳೆದ 24 ಟೆಸ್ಟ್‌ಗಳಲ್ಲಿ 6 ಬಾರಿ ಅರ್ಧಶತಕಗಳ ಕೊಡುಗೆ ನೀಡಿದ್ದಾರೆ.
 *9: ಏಶ್ಯದಲ್ಲಿ ಕೇನ್ ವಿಲಿಯಮ್ಸನ್ 22 ಟೆಸ್ಟ್ ಇನಿಂಗ್ಸ್‌ಗಳಲ್ಲಿ 9ನೆ ಬಾರಿ ಅರ್ಧಶತಕ ಸಿಡಿಸಿದ್ದಾರೆ. ಟೆಸ್ಟ್ ಪ್ರವೇಶದ ಬಳಿಕ ಸಾಧನೆ ಮಾಡಿದ ವಿದೇಶದ ಎರಡನೆ ಬ್ಯಾಟ್ಸ್‌ಮನ್ ವಿಲಿಯಮ್ಸನ್. ವಿಂಡೀಸ್‌ನ ಡರೆನ್ ಬ್ರಾವೋ 25 ಇನಿಂಗ್ಸ್‌ಗಳಲ್ಲಿ 10 ಅರ್ಧಶತಕಗಳನ್ನು ದಾಖಲಿಸಿ ಏಶ್ಯದಲ್ಲಿ ಈ ಸಾಧನೆ ಮಾಡಿದ ವಿದೇಶದ ಮೊದಲ ದಾಂಡಿಗ ಎನಿಸಿಕೊಂಡಿದ್ದರು.
*41: ರವೀಂದ್ರ ಜಡೇಜ ಮತ್ತು ಉಮೇಶ್ ಯಾದವ್ ಅಂತಿಮ ವಿಕೆಟ್‌ಗೆ 41 ರನ್‌ಗಳ ಕೊಡುಗೆ ನೀಡಿದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್: 97 ಓವರ್‌ಗಳಲ್ಲಿ 318 ರನ್‌ಗೆ ಆಲೌಟ್

ಕೆಎಲ್ ರಾಹುಲ್ ಸಿ ವಾಟ್ಲಿಂಗ್ ಬಿ ಸ್ಯಾಂಟ್ನರ್ 32

ಎಂ.ವಿಜಯ್ ಸಿ ವಾಟ್ಲಿಂಗ್ ಬಿ ಸೋಧಿ 65

ಚೇತೇಶ್ವರ ಪೂಜಾರ ಸಿ ಮತ್ತು ಬಿ ಸ್ಯಾಂಟ್ನರ್ 62

ವಿರಾಟ್ ಕೊಹ್ಲಿ ಸಿ ಸೋಧಿ ಬಿ ವ್ಯಾಗ್ನರ್ 09

ಅಜಿಂಕ್ಯ ರಹಾನೆ ಸಿ ಲ್ಯಾಥಮ್ ಬಿ ಕ್ರೆಗ್ 18

ರೋಹಿತ್ ಶರ್ಮ ಸಿ ಸೋಧಿ ಬಿ ಸ್ಯಾಂಟ್ನರ್ 35

ಆರ್.ಅಶ್ವಿನ್ ಸಿ ಟೇಲರ್ ಬಿ ಬೌಲ್ಟ್ 40

ವೃದ್ದಿಮಾನ್ ಸಹಾ ಬಿ ಬೌಲ್ಟ್ 00

ರವೀಂದ್ರ ಜಡೇಜ ಔಟಾಗದೆ 42

ಮುಹಮ್ಮದ್ ಶಮಿ ಬಿ ಬೌಲ್ಟ್ 00

ಉಮೇಶ್ ಯಾದವ್ ಸಿ ವಾಟ್ಲಿಂಗ್ ಬಿ ವಾಗ್ನರ್ 09

ಇತರ 06

ವಿಕೆಟ್ ಪತನ: 1-42, 2-154, 3-167, 4-185, 5-209, 6-261, 7-262, 8-273, 9-277, 10-318.

ಬೌಲಿಂಗ್ ವಿವರ:

ಟಿಮ್ ಬೌಲ್ಟ್ 20-3-67-3

 ವಾಗ್ನರ್ 15-4-42-2

ಸ್ಯಾಂಟ್ನರ್ 23-2-94-3

ಕ್ರೆಗ್ 24-6-59-1

ಐಶ್ ಸೋಧಿ 15-3-50-1.

ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 47 ಓವರ್‌ಗಳಲ್ಲಿ 152/1

ಗಪ್ಟಿಲ್ ಎಲ್‌ಬಿಡಬ್ಲು ಯಾದವ್ 21

ಲ್ಯಾಥಮ್  ಔಟಾಗದೆ 56

ವಿಲಿಯಮ್ಸನ್ ಔಟಾಗದೆ 65

ಇತರ 10

ವಿಕೆಟ್ ಪತನ: 1-35.

ಬೌಲಿಂಗ್ ವಿವರ:

ಮುಹಮ್ಮದ್ ಶಮಿ 8-1-26-0

ಉಮೇಶ್ ಯಾದವ್ 7-2-22-1

ರವೀಂದ್ರ ಜಡೇಜ 17-1-47-0

ಆರ್.ಅಶ್ವಿನ್ 14-1-43-0

ಎಂ.ವಿಜಯ್ 1-0-5-0.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News