×
Ad

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ; ಮೌನ ಮೆರವಣಿಗೆ

Update: 2016-09-23 21:07 IST

ಮಂಗಳೂರು, ಸೆ. 23: 19 ಸಂಘಟನೆಗಳನ್ನೊಳಗೊಂಡ ‘ಯುನೈಟೆಡ್ ಫಾರ್ ಎ ಬೆಟರ್ ದಕ್ಷಿಣ ಕನ್ನಡ’ ವತಿಯಿಂದ ಉರಿ ಸೇನಾ ನೆಲೆಯ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಂದು ಸಂಜೆ ನಗರದ ಕದ್ರಿ ಯೋಧರ ಸ್ಮಾರಕದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ ಎಂ., ಭಾರತೀಯ ಸೇನಾ ಯೋಧರು ದೇಶದ ಗಡಿ ಕಾಯುತ್ತಿರುವುದರಿಂದಲೇ ನಾವಿಂದು ನಿಶ್ಚಿಂತರಾಗಿ ಓಡಾಡುತ್ತಿದ್ದೇವೆ. ದೇಶದ ಭದ್ರತೆ ಮತ್ತು ಏಕತೆಗಾಗಿ ಯೋಧರ ಬಲಿದಾನಗಳನ್ನು ನಾವು ಸ್ಮರಿಸುವಂತಾಗಬೇಕು ಎಂದರು.

ನಿವೃತ್ತ ಯೋಧರ ಸಂಘದ ಅಧ್ಯಕ್ಷ ವಿಕ್ರಂ ದತ್ತ ಮಾತನಾಡಿ, ಹುತಾತ್ಮರಾದ ಯೋಧರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಸಹಿಸುವ ಸಾಮರ್ಥ್ಯ ಭಗವಂತ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಘಟಕ ಸೈಫ್ ಸುಲ್ತಾನ್ ಸೈಯದ್, ಡಿಸಿಪಿ (ಅಪರಾಧ ಮತ್ತು ಸಂಚಾರ) ಡಾ.ಸಂಜೀವ್ ಎಂ.ಪಾಟೀಲ್, ಚೊಕ್ಕಬೆಟ್ಟು ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ಸಿಒಡಿಪಿ ನಿರ್ದೇಶಕ ಓಸ್ವಾಲ್ಡ್ ಮೊಂತೆರೊ, ರಶೀದ್ ವಿಟ್ಲ, ರಿಯಾಝ್, ಸಲೀಂ, ಉಮರ್ ಯು.ಎಚ್., ಶಿವರಾಜ್ ಶೆಟ್ಟಿ ಕೊಳಂಬೆ, ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಸ್.ಎಂ.ಫಾರೂಕ್, ವಾಲ್ಟರ್ ಜೆ.ಮೊಬಿನ್, ಝುಬೇರ್ ವಿಟ್ಲ, ಅಬೂಬಕರ್, ಇಕ್ಬಾಲ್ ಸಿಂಗ್, ನಿವೃತ್ತ ಯೋಧರಾದ ಭಗವಾನ್ ಶೆಟ್ಟಿ, ದೀಪಕ್ ಅಡ್ಯಂತಾಯ, ಹವಾಲ್ದಾರ್ ಮುಹಮ್ಮದ್ ಕೆ., ಹವಾಲ್ದಾರ್ ಅಬ್ಬಾಸ್ ಅಲ್ಲದೆ, ದ.ಕ. ಜಿಲ್ಲೆಯ ಅಹಿಂದ, ಅಲ್ ಹಖ್ ಫೌಂಡೇಶನ್, ಬಂಟರ ಯಾನೆ ನಾಡವರ ಮಾತೃ ಸಂಘ, ಕ್ಯಾಥಲಿಕ್ ಡಯಾಸಿಸ್ ಮಂಗಳೂರು, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ), ಹಿದಾಯ ಫೌಂಡೇಶನ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ, ಹೋಪ್ ಫೌಂಡೇಶನ್, ಜೈನ್ ಸಮಿತಿ ಮಂಗಳೂರು, ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನಲ್ ಸೊಸೈಟಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಮಿಶನ್ ನೆಟ್‌ವರ್ಕ್, ಕೆಕೆಎಂಎ, ಎಂ.ಫ್ರೆಂಡ್ಸ್, ಮೊಗವೀರ ಮಹಾಜನ ಸಂಘ, ಮುಸ್ಲಿಂ ಲೇಖಕರ ಸಂಘ, ಶ್ರೀ ಗುರು ಸಿಂಗ್ ಸಭಾ ಸೊಸೈಟಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಯುವ ವಾಹಿನಿ ಕೇಂದ್ರ ಸಮಿತಿ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕದ್ರಿ ಪಾರ್ಕ್ ಎದುರಿನಿಂದ ಯೋಧರ ಸ್ಮಾರಕದವರೆಗೆ  ಮೌನ ಮೆರವಣಿಗೆ ನಡೆಯಿತು. ಬಳಿಕ ಗಣ್ಯರು ಸ್ಮಾರಕದಲ್ಲಿ ಪುಷ್ಪಾರ್ಚನೆ ಮಾಡಿ,  ಮೌನ ಪ್ರಾರ್ಥನೆ ನಡೆಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News