ಕೋಮು ಪ್ರಚೋದಕರ ವಿರುದ್ಧ ಕ್ರಮ ಕೈಗೊಳ್ಳಲು ಎಸ್ಕೆಎಸ್ಸೆಸ್ಸೆಫ್ ಮನವಿ
Update: 2016-09-23 22:10 IST
ಮಂಗಳೂರು, ಸೆ.23: ಕೋಮು ಪ್ರಚೋದಿತ ಭಾಷಣಗಳ ಮೂಲಕ ಕರಾವಳಿಯ ಜನರ ಮಧ್ಯೆ ಶಾಂತಿ ಕೆಡಿಸಲು ನಿರಂತರ ಪ್ರಯತ್ನಿಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ದಾಖಲಾಗಿರುವ ಎಲ್ಲ ದೂರುಗಳನ್ನು ಮರು ತನಿಖೆ ಮಾಡಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಆಗ್ರಹಿಸಿದೆ.
ಭಾರತದ ಪ್ರತಿಯೊಬ್ಬ ಪ್ರಜೆಗೂ ತನಗಿಷ್ಟವಿರುವ ಧರ್ಮಕ್ಕೆ ಮತಾಂತರವಾಗಲು ಹಾಗೂ ಪ್ರತಿಯೊಂದು ಧರ್ಮದವರಿಗೂ ಅವರ ಆಚಾರ-ವಿಚಾರಗಳನ್ನು ಅನುಷ್ಠಾನಗೈಯಲು ಭಾರತದ ಸಂವಿಧಾನದಲ್ಲಿ ಅವಕಾಶವಿದೆ. ಇನ್ನೊಬ್ಬರ ವ್ಯಕ್ತಿ ಸ್ವಾತಂತ್ರ್ಯದಲ್ಲಿ ಕೈಹಾಕುವ ಕೀಳಭಿರುಚಿಯನ್ನು ಸಂಘ ಪರಿವಾರವು ನಿಲ್ಲಿಸಬೇಕೆಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯಾದ್ಯಕ್ಷ ಅನೀಸ್ ಕೌಸರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.