ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ
Update: 2016-09-23 23:29 IST
ಶ್ರೀನಗರ, ಸೆ.23: ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ಬಳಿಕ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದೆಂಬ ಸಂದೇಹದಿಂದ ಶ್ರೀನಗರದ ಕೆಲವು ಭಾಗಗಳಲ್ಲಿಂದು ಕರ್ಫ್ಯೂ ವಿಧಿಸಲಾಗಿದೆ.
ಕೆಳ ಪೇಟೆಯ 5 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಮೇಲು ಪೇಟೆಯ ಬಾಟಮಲೂ ಹಾಗೂ ಮೈಸುಮಾ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಕಣಿವೆಯ ಉಳಿದ ಭಾಗದಲ್ಲಿ ಜನ ಸೇರುವಿಕೆಗೆ ನಿರ್ಬಂಧ ಮುಂದು ವರಿದಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ಬಳಿಕ, ಕಾನೂನು- ಸುವ್ಯವಸ್ಥೆಗೆ ಸಮಸ್ಯೆ ಉಂಟಾಗಬಹುದೆಂಬ ಸಂಶಯದಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ.
ಕಾಶ್ಮೀರದ ಜನ ಜೀವನ ನಿರ್ಬಂಧಕಾಜ್ಞೆ ಹಾಗೂ ಪ್ರತ್ಯೇಕತಾವಾದಿಗಳ ಪ್ರತಿಭಟನೆಗಳಿಂದಾಗಿ ಸತತ 77ನೆ ದಿನವೂ ಅಸ್ತವ್ಯಸ್ತವಾಗಿಯೇ ಮುಂದುವರಿದಿದೆ. ಹಿಂಸಾಚಾರದಲ್ಲಿ ಇದುವರೆಗೆ 81 ಮಂದಿ ಬಲಿಯಾಗಿದ್ದಾರೆ.