ಬ್ರಾಡ್ ಪಿಟ್ ವಿರುದ್ದ ಎಫ್ ಬಿಐ ತನಿಖೆ
ನ್ಯೂಯಾರ್ಕ್, ಸೆಪ್ಟಂಬರ್ 24: ಹಾಲಿವುಡ್ ತಾರೆ ಬ್ರಾಡ್ ಪಿಟ್ ವಿರುದ್ಧ ಅಮೆರಿಕದ ಅಪರಾಧ ತನಿಖೆ ಸಂಸ್ಥೆಯಾದ ಫೆಡರಲ್ ಬ್ಯೂರೊ ಆಫ್ ಇನ್ವಿವೆಸ್ಟಿಗೇಶನ್(ಎಫ್ಬಿಐ) ತನಿಖೆ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ತನ್ನಸ್ವಂತ ಮಕ್ಕಳಿಗೆ ಮಾನಸಿಕವಾಗಿ ಕಿರುಕುಳ ನೀಡುವ ರೀತಿಯಲ್ಲಿ ಬೈದಿದ್ದಾರೆ ಎಂದು ಆರೋಪ ಹೊರಿಸಿ ಅವರ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಕೆಲವುದಿವಸಗಳ ಹಿಂದೆ ಬ್ರಾಡ್ಪಿಟ್ ಖಾಸಗಿ ಜೆಟ್ನಲ್ಲಿಮಕ್ಕಳೊಂದಿಗೆ ಪ್ರಯಾಣಿಸುವ ವೇಳೆ ಈ ಘಟಣೆ ನಡೆದಿದೆ ಎನ್ನಲಾಗಿದ್ದು, ಬ್ರಾಡ್ಪಿಟ್ ವಿರುದ್ಧ ಕೇಸುದಾಖಲಿಸಿಕೊಂಡಿರುವುದನ್ನು ಎಫ್ಬಿಐ ದೃಢೀಕರಿಸಿದೆ.
ಮಕ್ಕಳೊಂದಿಗಿನ ಬ್ರಾಡ್ಪಿಟ್ರ ವರ್ತನೆ ಮತ್ತು ವಿವಾಹೇತರ ವ್ಯವಹಾರವೇ ಆಂಜಲಿನಾಜೋಲಿ ಜೊತೆಗೆ ವಿವಾಹವಿಚ್ಛೇದನಕ್ಕೆ ಹೋಗಲು ಪ್ರೇರಣೆಯಾಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ. ಮಕ್ಕಳ ಸಂರಕ್ಷಣೆಯ ಹೊಣೆಯನ್ನು ತನಗೆ ಬಿಟ್ಟುಕೊಡಬೇಕೆಂದು ಆಂಜಲಿನಾ ಜೊತೆಗೆ ಕೋರ್ಟಿನ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸ್ ಸಿನೆಮಾದಲ್ಲಿ ನಟಿಸುವಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಂತರ 2014ರಲ್ಲಿ ಇವರಿಬ್ಬರೂ ಮದುವೆಯಾಗಿದ್ದರು ಎಂದು ವರದಿ ತಿಳಿಸಿದೆ.