×
Ad

ಪ್ರತೀವರ್ಷ ಯುಎಇ-ಭಾರತಗಳ ನಡುವೆ ಎಷ್ಟು ಕೋಟಿ ವ್ಯವಹಾರ ನಡೆಯುತ್ತಿದೆ? ಇಲ್ಲಿದೆ ಉತ್ತರ !

Update: 2016-09-24 16:11 IST

ಶಾರ್ಜ.ಸೆಪ್ಟಂಬರ್ 24:ಯುಎಇ ಮತ್ತು ಭಾರತ ನಡುವೆ ಪ್ರತಿವರ್ಷ 22,000 ಕೋಟಿ ದಿರ್‌ಹಮ್ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂದು ಶಾರ್ಜ ಇನ್‌ವೆಸ್ಟ್‌ಮೆಂಟ್ ಆ್ಯಂಡ್ ಡೆವಲಪ್‌ಮೆಂಠ್ ಆಥಾರಿಟಿ(ಶುರುಕ್) ಸಿಇಒ ಮರ್ವಾನ್ ಬಿನ್ ಜಾಸಿಂ ಅಲ್ ಸರ್ಕಾರ್ ಹೇಳಿದ್ದಾರೆಂದು ವರದಿಯಾಗಿದೆ. ಎರಡು ದೇಶಗಳ ನಡುವಿನ ಐತಿಹಾಸಿಕವಾದ ಸಂಬಂಧವು ಹೂಡಿಕೆ-ವ್ಯಾಪಾರ ಕ್ಷೇತ್ರದಲ್ಲಿ ದಕ್ಷತೆ ಮತ್ತು ಪ್ರಗತಿಯನ್ನು ದಾಖಲಿಸಿದೆ. ವೈವಿಧ್ಯಪೂರ್ಣಕ್ರಮಗಳು ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ದಕ್ಷತೆಯನ್ನು ತಂದು ಕೊಟ್ಟಿದೆ.ಆಧುನಿಕ ತಂತ್ರಾಜ್ಞಾನ, ನುರಿತ ಕಾರ್ಮಿಕರು ಮುಂತಾದ ಘಟಕಗಳು ವ್ಯಾಪಾರಿ ಕ್ಷೇತ್ರದಲ್ಲಿ ಉಪಯುಕ್ತ ಬದಲಾವಣೆಯನ್ನು ತಂದು ಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಉಭಯ ದೇಶಗಳು ಜಂಟಿಯಾಗಿ ಆರಂಭಿಸಿದ ಯೋಜನೆಗಳು ಆಶಾದಾಯಕ ಪ್ರಗತಿಯನ್ನು ಕಂಡಿವೆ. ಅದು ಆರ್ಥಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮೆರೆದಿವೆ. ಹೆಚ್ಚಿನ ಕ್ಷೇತ್ರಗಳಲ್ಲಿ ಸೌಹಾರ್ದ ವ್ಯಾಪಿಸಲು ಕಾರಣವಾಗಿವೆ. ಹೆಚ್ಚು ಭಾರತೀಯ ಕಂಪೆನಿಗಳು ಶಾರ್ಜಕ್ಕೆ ಕಾಲಿಡುತ್ತಿವೆ.ಒಟ್ಟು ಆಂತರಿಕ ಉತ್ಪಾದನೆಯಲ್ಲಿ  ಬೆಳವಣಿಗೆಯನ್ನು ಶಾರ್ಜ ದಾಖಲಿಸಿದೆ. ಉಭಯ ದೇಶಗಳ ನಡುವೆ ಪರಸ್ಪರ ವ್ಯಾಪಾರ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಂಬಂಧಗಳು ಹೆಚ್ಚಿನ ಸಾಧ್ಯತೆಗಳ ಕುರಿತು ಶಾರ್ಜ ಫಾರಿನ್ ಡೈರೆಕ್ಟರ್ ಇನ್‌ವೆಸ್ಟ್‌ಮೆಂಟ್ ಫಾರಂ (ಶಾರ್ಜ ಎಫ್‌ಡಿಐ ಫಾರಂ) ಚರ್ಚಿಸಲಿದೆ ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್‌ನ ಫೈನಾನ್ಸಿಯಲ್ ಟೈಮ್ಸ್‌ನ ಸಹಕಾರದೊಂದಿಗೆ ಶಾರ್ಜದ ಶರಾಟನ್ ಬೀಚ್ ರಿಸಾರ್ಟ್‌ನಲ್ಲಿ ಇದೇ ತಿಂಗಳ 28,29ಕ್ಕೆ ವಾಣಿಜ್ಯ ಕ್ಷೇತ್ರದ ಪ್ರಮುಖರು ಭಾವಹಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜ ಆಡಳಿತಾಧಿಕಾರಿಯಾದ ಶೈಕ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್‌ಖಾಸ್ಮಿಯವರ ಪೋಷಕತ್ವದಲ್ಲಿ ನಡೆಯಲಿದೆ. ನಿಕಾಯಿ ಗ್ರೂಪ್ ಚೇರ್‌ಮೆನ್, ಪರಸ್ ಶಹದಾಪುರಿ, ಬಹ್ರೈನ್ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀ ಪ್ರತಿನಿಧಿ ಎಸ್.ರಾಘವನ್, ಇಂಡಿಯನ್ ಬಿಸಿನೆಸ್ ಆ್ಯಂಡ್ ಪ್ರೊಫೆಶನಲ್ ಕೌನ್ಸಿಲ್ ಚೇರ್‌ಮೆನ್ ಸುಧೇಶ್ ಕೆ. ಅಗರ್ವಾಲ್ ಮುಂತಾದ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆಂದು ಜಾಸಿಂ ಅಲ್ ಸರ್ಕಾರ್ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News