ಮಿಸ್ಬಾಹ್ ವಿಮೆನ್ಸ್ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ
ಮಂಗಳೂರು,ಸೆ.24: ಮಿಸ್ಬಾಹ್ ವಿಮೆನ್ಸ್ ಕಾಲೇಜ್ ಕಾಟಿಪಳ್ಳ ಇದರ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷರಾದ ಬಿ.ಎಂ.ಮಮ್ತಾಜ್ ಅಲಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಜನಾಬ್ ಮೊಹಮ್ಮದ್ ಇಕ್ಬಾಲ್, ವ್ಯವಸ್ಥಾಪಕ ನಿರ್ದೇಶಕರು ಫ್ರಿ-ಲ್ಯಾನ್ಸ್ ಟ್ರೇಡಿಂಗ್ & ಕ್ವನ್ಟ್ರಕ್ಟ್ ಕತ್ತಾರ್ ಇವರು ಮುಖ್ಯ ಅತಿಥಿಯಾಗಿ ಸಮಾರಂಭದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇನ್ನೋರ್ವ ಅತಿಥಿ ಜನಾಬ್ ನಝೀರ್ ಹುಸೈನ್, ಅಧ್ಯಕ್ಷರು, ಅಲ್ ಫಲಾಹ್ ಗ್ರೂಪ್ ಅಫ್ ಕಂಪೆನಿಸ್, ಕೆಎಸ್‌ಎ. ಇವರು ಸಂಘಟನೆಯ ಮುಖ್ಯ ಉದ್ದೇಶವನ್ನು ಅವರ ಬಿಚ್ಚುನುಡಿಗಳ ಮೂಲಕ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು.
ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ನ ನಿರ್ದೇಶಕರಾದ ಜನಾಬ್ ಶಾಫಿ ಸಅದಿ ಅವರು ಯಾವ ಉದ್ದೇಶದಿಂದ ಮಿಸ್ಬಾಹ್ ವಿಮೆನ್ಸ್ ಕಾಲೇಜು ಪ್ರಾರಂಭವಾಗಿದೆಯೋ ಅದರ ಕನಸು ನನಸಾಗಲಿ ಎಂದು ತುಂಬು ಹೃದಯದಿಂದ ಹಾರೈಸಿದರು. ಇದರೊಂದಿಗೆ ಇಸ್ಲಾಮಿನಲ್ಲಿ ಮಹಿಳೆಯರಿಗೆ ಅತ್ತ್ಯುನ್ನತ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿಯಾದ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನಾಬ್ ಕೆ.ಹೆಚ್. ಶರೀಫ್ ಮಣಿಪಾಲ್, ಮಾಲಕರು, ಕೆ.ಹೆಚ್. ಹಾರ್ಡ್‌ವೇರ್,
ಕೆ.ಹೆಚ್. ರಫೀಕ್ ಸೂರಿಂಜೆ, ವ್ಯವಸ್ಥಾಪಕ ನಿರ್ದೇಶಕರು ಪಸ್ಟ್ ಅರಬಿಯಾ ಕಂಪೆನಿ, ಕೆಎಸ್‌ಎ,
ಬಿ.ಎ.ನಝೀರ್ ಸಂಚಾಲಕರು, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್, ಫಕ್ರುದ್ದೀನ್ ಬಾವ, ಟಿ.ಹೆಚ್.ಮೆಹಬೂಬ್ ಅಲ್ ಜುಬೈಲ್ , ಮೊಹಮ್ಮದ್ ಮುಬೀನ್ ಅಲ್ ಜುಬೈಲ್, ನಝೀರ್ ಹುಸೈನ್ ಕತ್ತಾರ್, ಮುಹಮ್ಮದ್ ಆರೀಫ್ ಪ್ರಾಚಾರ್ಯರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸನಾಹ್ ಹುಸೈನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರಂಜಿತಾ ಸ್ವಾಗತಿಸಿ, ಉಪನ್ಯಾಸಕಿ ಶಾರದಾ ಧನ್ಯವಾದ ಅರ್ಪಿಸಿದರು.