ಉಳಿತ್ತೊಟ್ಟು: ಅಲ್ಇಖ್ವಾನ್ ಕಮಿಟಿಯ ಪದಾಧಿಕಾರಿಗಳ ಆಯ್ಕೆ
ನೆಲ್ಯಾಡಿ, ಸೆ.24: ಇಲ್ಲಿನ ಸಮೀಪದ ಉಳಿತೊಟ್ಟು ಬಿಲಾಲ್ ಜುಮಾ ಮಸೀದಿಯ ಅಧೀನದಲ್ಲಿರುವ ನೂರುಲ್ ಹುದಾ ಮದ್ರಸದ ಹಳೆ ವಿದ್ಯಾರ್ಥಿ ಸಂಘಟನೆ ಅಲ್ ಇಖ್ವಾನ್ ಕಮಿಟಿಯ ವಾರ್ಷಿಕ ಮಹಾಸಭೆಯು ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕಮಿಟಿಯ ಗೌರವಾದ್ಯಕ್ಷ ಅಬ್ದುಲ್ ಅಝೀಝ್ ನೂರಾನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬ್ ರಫೀಕ್ ಮದನಿ ಉದ್ಘಾಟಿಸಿದರು. ಇದೇ ಸಂದರ್ಭ ಅಲ್ ಇಖ್ವಾನ್ ಕಮಿಟಿಯ 2016-17ನೆ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ದಾವೂದ್ ಬಿಲಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಮೀರುದ್ದೀನ್ ಪಡುಬೆಟ್ಟು ಆಯ್ಕೆಯಾದರು. ಕೋಶಾಧಿಕಾರಿಯಾಗಿ ಸಮೀರ್ ತಾಜ್, ಉಪಾಧ್ಯಕ್ಷರಾಗಿ ರಫೀಕ್ ಉಳಿತೊಟ್ಟು, ಸಿದ್ದೀಕ್, ಜೊತೆ ಕಾರ್ಯದರ್ಶಿಯಾಗಿ ನೌಷಾದ್ ಯು.ಎ., ಸ್ವಾಲಿಹ್ ಯು.ಎ. ಸಮಿತಿ ಸದಸ್ಯರಾಗಿ ಶರೀಫ್ ತಾಜ್, ಅಬ್ಬಾಸ್ ಪೊಯ್ಯತಡ್ಡ, ಮನ್ಸೂರ್ ಯು.ಎ. , ಸಲೀಂ ಪಿ.ಎಸ್., ಫಾರೂಕ್ ಎನ್.ಪಿ, ಸಿನಾನ್ ಎಂ., ಜಾಫರ್ ಶರೀಫ್, ರಿಯಾಝ್ ಆಯ್ಕೆಯಾದರು. ವೇದಿಕೆಯಲ್ಲಿ ಮಸೀದಿಯ ಅಧ್ಯಕ್ಷ ಹಸನಬ್ಬ, ಅಲ್ಇಖ್ವಾನ್ ಕಮಿಟಿಯ ಅಧ್ಯಕ್ಷ ರಫೀಕ್ ಉಳಿತೊಟ್ಟು, ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ, ವಂದಿಸಿದರು.