ಮೊದಲ ಟೆಸ್ಟ್: ಭಾರತ ಮೇಲುಗೈ

Update: 2016-09-24 11:52 GMT

ಕಾನ್ಪುರ, ಸೆ.24: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಎರಡನೆ ಇನಿಂಗ್ಸ್ ನಲ್ಲಿ 47 ಓವರ್ ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿದೆ.

ಆರಂಭಿಕ ದಾಂಡಿಗ ಕೆಎಲ್ ರಾಹುಲ್ 38 ರನ್ ಗಳಿಸಿ ಔಟಾಗಿದ್ದಾರೆ. ಮುರಳಿ ವಿಜಯ್ ಔಟಾಗದೆ 64 ರನ್ ಮತ್ತು ಚೇತೇಶ್ವರ ಪೂಜಾರ ಔಟಾಗದೆ 50 ರನ್ ಗಳಿಸಿ ನಾಲ್ಕನೆ ದಿನಕ್ಕೆ ಬ್ಯಾಟಿಂಗ್ ನ್ನು ಕಾಯ್ದಿರಿಸಿದ್ದಾರೆ.

ಇದಕ್ಕೂ ಮೊದಲು ನ್ಯೂಝಿಲೆಂಡ್ ಮೊದಲ  ಇನಿಂಗ್ಸ್ ನಲ್ಲಿ 95.5 ಓವರ್ ಗಳಲ್ಲಿ 262 ರನ್ ಗಳಿಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News