ಭಟ್ಕಳ:ಶಮ್ಸ್ ಶಾಲಾ ವಿದ್ಯಾರ್ಥಿಗಳು ಐಟಿ ರೂರಲ್ ಕ್ವಿಝ್ ನಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

Update: 2016-09-24 12:46 GMT

ಭಟ್ಕಳ,ಸೆ.24: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಿಕ್ಷಣ ಸಂಸ್ಥೆಯ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ರೂರಲ್ ಐಟಿ ಕ್ವಿಝ್ ಸ್ಪರ್ಧೆಯಲ್ಲಿ  ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಂ.ಆರ್. ಮಾನ್ವಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶನಿವಾರ ಕಾರವಾರದ ಬಾಲಮಂದಿರ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಜರಗಿದ ಗ್ರಾಮೀಣ ಐಟಿ ಕ್ವಿಝ್ ಸ್ಪರ್ಧೆಯ ಆರ್ಹತಾ ಸುತ್ತಿನಲ್ಲಿ ನ್ಯೂ ಶಮ್ಸ್ ಸ್ಕೂಲ್ ನ ಕಾಮಿಲ್ ದಾಮೂದಿ ಹಾಗೂ ಕಬ್ಬಾಬ್ ರುಕ್ನುದ್ದೀನ್ ರ ತಂಡ ಮತ್ತು ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಹಮ್ಮದ್ ಶಾಮ್ವಿಲ್ ಶೇಖ್, ಇಸ್ಮಾಯಿಲ್ ಕಾಕಡೆ ಯವರ ತಂಡ ಉತ್ತಮ ಪ್ರದರ್ಶನದೊಂದಿಗೆ ವಿಭಾಗೀಯ ಮಟ್ಟದ ಗ್ರಾಮೀಣ ಕ್ವಿಝ್ ಸ್ಪರ್ಧೆಗೆ ಆರ್ಹತೆಯನ್ನು ಪಡೆದುಕೊಂಡಿದ್ದಾರೆ. ಆ.೧೮ರಂದು ಧಾರಡಾದಲ್ಲಿ ವಿಭಾಗೀಯಮಟ್ಟದ ಸ್ಪರ್ಧೆಗಳು ನಡೆಯಲಿದ್ದು ವಿದ್ಯಾರ್ಥಿಗಳು ಅಲ್ಲಿಯೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳಲಿ ಎಂದು ಅವರು ಹಾರೈಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗಾಗಿ ಪ್ರಾಂಶುಪಾಲೆ ಫಹಮಿದಾ ಡಾಟಾ, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಮತ್ತಿತರರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News