ಉಪ್ಪಿನಂಗಡಿ: ನೇಣು ಬಿಗಿದು ಯುವಕನ ಆತ್ಮಹತ್ಯೆ
Update: 2016-09-24 19:29 IST
ಉಪ್ಪಿನಂಗಡಿ: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಾಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿ ಗಣೇಶ ಗೌಡರ ಪುತ್ರ ಶರತ್ ಕುಮಾರ್ (25) ಮೃತ ಯುವಕ. ಮಂಗಳೂರಿನಲ್ಲಿ ಲಾರಿಯೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದ ಈತ ರಜೆಯಲ್ಲಿ ಮನೆಗೆ ಬಂದಿದ್ದು, ಇಂದು ಬೆಳಗ್ಗೆ 9:30ರ ಸುಮಾರಿಗೆ ಮನೆಯ ಕೋಣೆಯಲ್ಲಿಯೇ ಪಕ್ಕಾಸಿಗೆ ನೇಣುಬಿಗಿದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತಾಯಿಯ ಮಾನಸಿಕ ಕಾಯಿಲೆ ಹಾಗೂ ತನಗಿದ್ದ ಕೈಸಾಲದಿಂದ ನೊಂದು ಈತ ಈ ಕೃತ್ಯವೆಸಗಿದ್ದಾನೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.