ಬಿಜೈ: 10 ಹೊಟೇಲ್‌ಗಳಿಗೆ ಮನಪಾ ದಾಳಿ - 65,000ದಂಡ
ಮಂಗಳೂರು, ಸೆ.24: ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದಲ್ಲಿ ಅಧಿಕಾರಿಗಳು ಶನಿವಾರ ಸಂಜೆ ನಗರದ ಬಿಜೈಯ 10 ಹೊಟೇಲ್‌ಗೆ ದಿಢೀರ್ ದಾಳಿ ನಡೆಸಿದರು. ಈ ಸಂಬಂಧ ಶುಚಿತ್ವ ಕಾಪಾಡದ 6 ಹೊಟೇಲ್‌ಗಳಿಗೆ ನೋಟಿಸ್ ನೀಡಿ, ಪ್ರತಿ ಹೋಟೆಲ್‌ಗೆ 10,000 ರೂ. ದಂಡ ವಿಧಿಸಿದ್ದಾರೆ. 1 ಹೊಟೇಲ್‌ಗೆ ಬೀಗ ಜಡಿಯಲಾಯಿತು.
ಆಯುರ್ವೇದಿಕ್ ಸೆಂಟರ್‌ಗೆ ಬೀಗ
ಇದೇ ಸಂದರ್ಭದಲ್ಲಿ ಬಿಜೈಯಲ್ಲಿ ಕಾರ್ಯಾಚರಿಸುತ್ತಿದ್ದ ಆಯುರ್ವೇದಿಕ್ ಸೆಂಟರ್‌ವೊಂದಕ್ಕೆ ತಂಡ ದಾಳಿ ನಡೆ ಸಿತು. ಈ ಸಂದರ್ಭ ಒಳಗೆ ಅನಧಿ ಕೃತವಾಗಿ ಮಸಾಜ್ ನಡೆಸುತ್ತಿದ್ದ ಬಗ್ಗೆ ಗಮನಕ್ಕೆ ಬಂದಿದ್ದು, ಆಯುರ್ವೇದಿಕ್ ಸೆಂಟರ್‌ಗೆ ಬೀಗ ಜಡಿಯಲಾಯಿತು. ಸೆಂಟರ್‌ನಲ್ಲಿ ಅನಧಿಕೃತವಾಗಿ ಮಸಾಜ್ ಕೇಂದ್ರ ಕಾರ್ಯಾಚರಿಸುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು. ಬಿಜೈ ಬಿಗ್‌ಬಝಾರ್ ಬಳಿ ರಸ್ತೆ ಬದಿಯಲ್ಲಿ ಫಾಸ್ಟ್‌ಫುಡ್ ತಯಾ ರಿಸುತ್ತಿದ್ದ ರಿಕ್ಷಾ ಟೆಂಪೊವನ್ನು ವಶಕ್ಕೆ ಪಡೆಯಲಾಯಿತು. ಬೇಕರಿ ಒಂದಕ್ಕೆ ದಾಳಿ ನಡೆಸಿದ ಮನಪಾಂಡ 5,000 ರೂ. ದಂಡ ವಿಧಿಸಿದೆ.