varthabharati.in ಹೆಸರು ದುರ್ಬಳಕೆ ಮಾಡಿ ಸುಳ್ಳುಸುದ್ದಿ ಹರಡುವವರ ವಿರುದ್ಧ ಆಯುಕ್ತರಿಗೆ ದೂರು, ಪ್ರಕರಣ ದಾಖಲು
ಮಂಗಳೂರು, ಸೆ.24 : varthabharati.in ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗು ಫೇಸ್ ಬುಕ್‌ಗಳಲ್ಲಿ ನೀಡುವ ಸುದಿ ಲಿಂಕ್‌ಗಳನ್ನು ದುರ್ಬಳಕೆ ಮಾಡಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುವ ಬಗ್ಗೆ ಓದುಗರಿಂದ ವಾರ್ತಾಭಾರತಿಗೆ ದೂರು ಬಂದಿವೆ. ಪತ್ರಿಕೆಯ ಗಮನಕ್ಕೆ ಬಂದ ಒಂದು ಇಂತಹ ನಿರ್ದಿಷ್ಟ ಪ್ರಕರಣದ ವಿವರಗಳ ಜೊತೆ ವಾರ್ತಾಭಾರತಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ಈ ದುಷ್ಕೃತ್ಯ ಮಾಡಿರುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ 505 ಸೆಕ್ಷನ್ ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಯುಕ್ತರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದಾರೆ.
ಸುಳ್ಳು ಸುದ್ದಿ ಹರಡುವವರೇ ಎಚ್ಚರ !
ಸುದ್ದಿ, ಮಾಹಿತಿ ತಲುಪಿಸುವ ಆನ್ ಲೈನ್ ಮಾಧ್ಯಮಗಳ ಹೆಸರು ಹಾಗು ಅವುಗಳ ಸುದ್ದಿಯ ಲಿಂಕ್ ಅನ್ನು ಬಳಸಿ ತಮಗೆ ತೋಚಿದಂತೆ ಯಾವುದೇ ವ್ಯಕ್ತಿ, ಸಂಘಟನೆ, ಕುಟುಂಬ, ಪಕ್ಷ , ಸಮುದಾಯಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವುದು ತಮಾಷೆಯಲ್ಲ. ವದಂತಿ, ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ಅಶಾಂತಿ, ಕ್ಷೋಭೆ ಹರಡುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರಪೊಲೀಸರುಪ್ರಕರಣ ದಾಖಲಿಸುತ್ತಾರೆ. ಇದರಲ್ಲಿ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ಆಗುವ ಸಾಧ್ಯತೆ ಇದೆ.
ಓದುಗರಿಗೆ ಯಾರಾದರೂ ವಾರ್ತಾಭಾರತಿಯ ಹೆಸರಲ್ಲಿ ಇಂತಹ ಕುಕೃತ್ಯದಲ್ಲಿ ತೊಡಗಿದ್ದು ಕಂಡು ಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ವಾರ್ತಾಭಾರತಿ ಕಚೇರಿಗೆ (vbwebdesk@gmail.com ) ಮಾಹಿತಿ ನೀಡಲು ವಿನಂತಿ.