ಮಂಗಳೂರು: ಸರಣಿ ಅಪಘಾತ - ಇಬ್ಬರಿಗೆ ಗಾಯ
Update: 2016-09-24 22:33 IST
ಮಂಗಳೂರು, ಸೆ. 24: ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದಾಗಿ ಕಾರೊಂದು ನಿಯಂತ್ರಣ ಕಳೆದು ನಿಂತಿದ್ದ ಇಬ್ಬರಿಗೆ ಢಿಕ್ಕಿ ಹೊಡೆದು ಬಳಿಕ ಎರಡು ವಾಹನಗಳಿಗೆ ಹಾನಿಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ಕದ್ರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಕಿನ್ನಿಗೋಳಿಯ ಸಂತೋಷ್ ಮತ್ತು ಬೆಳ್ತಂಗಡಿಯ ಶ್ರೀನಿವಾಸ್ ಗಾಯಗೊಂಡಿದ್ದಾರೆ. ಕದ್ರಿಯ ಮಲಬಾರ್ ಹೊಟೇಲ್ ಬಳಿ ಅತೀವೇಗದಲ್ಲಿ ಸಂಚರಿಸುತ್ತಿದ್ದ ಕಾರೊಂದು ಸಮಿಪದಲ್ಲಿದ್ದ ಮಾಲ್‌ವೊಂದಲ್ಲಿ ಪಾರ್ಕ್ ಮಾಡಲಾಗಿದ್ದ ಆಟೊ ರಿಕ್ಷಾ ಮತ್ತು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಬಳಿಕ ರಸ್ತೆ ಬದಿ ನಿಂತಿದ್ದ ಸಂತೋಷ್ ಮತ್ತು ಶ್ರೀನಿವಾಸರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.