×
Ad

ಮಾಣಿಯಲ್ಲಿ ಮುಹಿಮ್ಮಾತ್ ಹಳೆ ವಿದ್ಯಾರ್ಥಿಗಳ ಸಂಗಮ

Update: 2016-09-24 22:45 IST

ಬಂಟ್ವಾಳ,ಸೆ.24: ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಬಳಿ ಕಾರ್ಯಾಚರಿಸುತ್ತಿರುವ ಮುಹಿಮ್ಮಾತುಲ್ ಮುಸ್ಲಿಮೀನ್ ಎಜ್ಯುಕೇಶನ್ ಸೆಂಟರ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಕರ್ನಾಟಕದ ಹಳೆ ವಿದ್ಯಾರ್ಥಿಗಳ ಸಭೆಯು  ಮಾಣಿಯ ದಾರುಲ್ ಇರ್ಶಾದ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯಲ್ಲಿ ಮುಹಿಮ್ಮಾತ್ ಸಂಸ್ಥೆಯಲ್ಲಿ ಕಲಿತ ದಕ್ಷಿಣ ಕನ್ನಡ ಉಡುಪಿ ಹಾಸನ ಮೊದಲಾದ ಜಿಲ್ಲೆಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. 2017ರ ಎಪ್ರಿಲ್ ತಿಂಗಳಲ್ಲಿ ಮುಹಿಮ್ಮಾತ್‌ನಲ್ಲಿ ನಡೆಯಲಿರುವ ಬೆಳ್ಳಿಹಬ್ಬದ ಪೂರ್ವ ತಯಾರಿ ಮತ್ತು ಪ್ರಚಾರ ಕಾರ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದವು.
ಮುಹಿಮ್ಮಾತ್‌ನ ನಿರ್ದೆಶಕರಾದ ಅಬ್ದುಲ್ ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ, ಮೂಸ ಸಖಾಫಿ, ಅಝೀಝ್ ಮಿಸ್ಬಾಹಿ ಅವರ ಮುಂದಾಳುತ್ವದಲ್ಲಿ ಈ ಸಭೆ ನಡೆಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಹಿಮ್ಮಾತ್ ಹಳೆ ವಿದ್ಯಾರ್ಥಿ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಹಿಮಮೀ ಸಂಘಕ್ಕೆ ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ದ.ಕ ಜಿಲ್ಲಾ ಮುಹಿಮ್ಮಾತ್ ಹಳೆ ವಿದ್ಯಾರ್ಥಿ ಸಂಘ ಪದಾಧಿಕಾರಿಗಳು:-
ಅಧ್ಯಕ್ಷರು:ಹಾಫಿಝ್ ತೌಸೀಫ್ ಹಿಮಮಿ ಸ-ಅದಿ
ಉಪಾಧ್ಯಕ್ಷರು: ಹಾಫಿಝ್ ಅನಸ್ ಅಹ್ಸನಿ,ಆಸಿಫ್ ಆತೂರ್,ಅಬ್ದುಲ್ ಹಮೀದ್ 
ಪ್ರ.ಕಾರ್ಯದರ್ಶಿ: ತಾಜುದ್ದೀನ್ ಕರಾಯ
ಜೊ.ಕಾರ್ಯದರ್ಶಿ: ಸಿರಾಜುದ್ದೀನ್ ಅಸೈಗೋಳಿ,ಮೂಸ ಕಲೀಂ ಸೆರಾಜೆ,ಶಾಕಿರ್ ಎಂಎಸ್‌ಇ
ಕೋಶಾಧಿಕಾರಿ: ಮುಸ್ತಫ ಹಿಮಮಿ ನಈಮಿ
ಸದಸ್ಯರು:ಸಿದ್ದೀಕ್ ಹಿಮಮಿ,ರಹ್ಮತುಲ್ಲ,ಹಾಫಿಝ್ ಸುಫ್ಯಾನ್ ಸಖಾಫಿ,ಹಾಫಿಝ್ ಮರ್ಶದ್ ಹುಮೈದಿ,ಇಕ್ಬಾಲ್ ಕಾಜೂರು,ಸಿನಾನ್ ಮದನಿ ಕಲ್ಲಡ್ಕ,ಹಾಫಿಝ್ ಬಶೀರ್ ಹಿಮಮಿ,ಹಂಝ ಕಿನ್ಯ,ನಾಸಿರ್ ಸುನ್ನತ್ಕೆರೆ,ಸವಾದ್ ಕುಂಬ್ರ,ಹನೀಫ್ ಕಾಯಾರ್

ದ.ಕ.ಜಿಲ್ಲಾ ಹಿಮಮಿ ಸಂಘದ ಪದಾಧಿಕಾರಿಗಳು:-
ಅಧ್ಯಕ್ಷರು: ಹೈದರ್ ಹಿಮಮಿ ಮಲಾರ್
ಉಪಾಧ್ಯಕ್ಷರು:ಸಿದ್ದೀಕ್ ಹಿಮಮಿ ಬಾಳೆಪುಣಿ,ಅಬುಬಕ್ಕರ್ ಹಿಮಮಿ ಕುಪ್ಪೆಟ್ಟಿ,ಅಝೀಝ್ ಹಿಮಮಿ
ಪ್ರ.ಕಾರ್ಯದರ್ಶಿ:ಅಬೂಬಕ್ಕರ್ ಹಿಮಮಿ ವಿಟ್ಲ
ಜೊ.ಕಾರ್ಯದರ್ಶಿ:ಬದ್ರುದ್ದೀನ್ ಹಿಮಮಿ,ಕೆ.ಕೆ. ಕಲಂದರ್ ಹಿಮಮಿ,ಹಸನ್ ಅಲಿ ಹಿಮಮಿ
ಕೋಶಾಧಿಕಾರಿ:ಬಶೀರ್ ಹಿಮಮಿ ಜೋಕಟ್ಟೆ
ಸದಸ್ಯರು:ರಫೀಕ್ ಹಿಮಮಿ,ಮುಸ್ತಫ ಹಿಮಮಿ ನಈಮಿ,ಮುಸ್ತಫ ಹಿಮಮಿ,ಎ.ಕೆ. ಅಷ್ರಫ್ ಹಿಮಮಿ,ಹಾಫಿಝ್ ತೌಸೀಫ್ ಹಿಮಮಿ,ಮನ್ಸೂರ್ ಹಿಮಮಿ,ಶಂಸುದ್ದೀನ್ ಹಿಮಮಿ,ರಊಫ್ ಹಿಮಮಿ,ಶರೀಫ್ ಹಿಮಮಿ ಕಕ್ಕಿಂಜೆ


1992ರಲ್ಲಿ ಸೈಯದ್ ತ್ವಾಹಿರುಲ್ ಅಹ್ದಳ್ ತಙಳ್ ಅವರ ನೇತ್ವದಲ್ಲಿ ಪ್ರಾರಂಭಗೊಂಡ ಮುಹಿಮ್ಮಾತ್ ವಿದ್ಯಾ ಕೇಂದ್ರವು 2017ಕ್ಕೆ 25ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಈ ಎರಡುವರೆ ದಶಕದ ಅವಧಿಯಲ್ಲಿ ಕೇರಳ ಮತ್ತು ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಇಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಪಡೆದಿದ್ದಾರೆ.
 

Writer - ವರದಿ: ಕಲೀಂ ಸೆರಾಜೆ

contributor

Editor - ವರದಿ: ಕಲೀಂ ಸೆರಾಜೆ

contributor

Similar News