ಇವತ್ತಿನ ವಿಶೇಷ ದಿನಾಚರಣೆಗಳು !

Update: 2016-09-25 07:42 GMT

ಇಂದು ಎಲ್ಲದಕ್ಕೂ ಒಂದೊಂದು ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಆ ದಿನವನ್ನು ನಮ್ಮದೇ ಆದ ರೀತಿಯಲ್ಲಿ ಸೆಲೆಬ್ರೇಟ್ ಮಾಡಿ ಖುಷಿ ಪಡುತ್ತೇವೆ. ಇವತ್ತು ವಿಶ್ವದ ಕೆಲವು ಕಡೆ ಆಚರಿಸುವ ಕೆಲವು ದಿನಾಚರಣೆಗಳು ಇಂತಿವೆ.

ಕಾಮಿಕ್  ಪುಸ್ತಕ ದಿನಾಚರಣೆ

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ತುಂಬಾ ಹಿಡಿಸುವ ಪುಸ್ತಕವೆಂದರೆ ಕಾಮಿಕ್ ಪುಸ್ತಕಗಳು. ಅದರಲ್ಲಿರುವ ಸಚಿತ್ರ ಕಥೆಗಳು ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತವೆ. ಇಂದು ಶಾಲಾ ಪಠ್ಯದಲ್ಲಿಯೂ ಕಾಮಿಕ್ ಚಿತ್ರಕಥೆಗಳು ಸ್ಥಾನ ಪಡೆದಿವೆ.

1837ರಲ್ಲಿ ಕಾಮಿಕ್ ಬುಕ್ ನ್ನು ಹೊರತರಲಾಯಿತು. ಅದು ಪ್ರಾನ್ಸ್ ಮತ್ತು ಅಮೆರಿಕಾದಲ್ಲಿ ಜನಪ್ರಿಯತೆಯನ್ನು ಪಡೆದು ಇಂದು ವಿಶ್ವದ ಎಲ್ಲ ದೇಶಗಳಲ್ಲೂ ತನ್ನ ಸ್ಥಾನವನ್ನು ಪಡೆದುಕೊಂಡಿತು. ಈ ಕಾಮಿಕ್ ಪುಸ್ತಕದ ಪಿತಾಮಹ ಎಂದು ರೊಡೊಲ್ಫ್ ಟೋಫ್ಫೇರ್ ನನ್ನು ಗುರುತ್ತಿಸುತ್ತೇವೆ.

ಕನಸಿನ ದಿನಾಚರಣೆ:

ಇಂದು ಕನಸಿನ ದಿನಾಚರಣೆ ಹಾಗಾಗಿ ಮಲಗಿ ಕನಸು ಕಾಣುತ್ತಾ ಈ ದಿನವನ್ನು ಆಚರಿಸಿ!

2012ರಲ್ಲಿ ಕೊಲಂಬಿಯಾ ಯುನಿವರ್ಸಿಟಿ ಮಾನಸಿಕವಾಗಿ ಸದೃಢರಾಗಲು ನಿದ್ದೆ ಬಹುಮುಖ್ಯವಾಗಿದೆ. ಅದರ ಜೊತೆ ನಾವು ನಮ್ಮ ಜೀವನದ ಗುರಿಯನ್ನು ಮುಟ್ಟಲು ಕನಸುಗಳು ಅಗತ್ಯವಿರುವುದರಿಂದ ಈ ದಿನವನ್ನು ಕನಸಿನ ದಿನಾಚರಣೆಯನ್ನಾಗಿ ಆರಂಭಿಸಿತು.

ಇನ್ನೇಕೆ ತಡಾ…ಕನಸು ಕಾಣಿ, ನಿಮ್ಮ ಗುರಿಯನ್ನು ನನಸಾಗಿಸಿ !

ಅಡುಗೆ ದಿನಾಚರಣೆ:

ಪ್ರತಿಯೊಬ್ಬರಿಗೂ ಉತ್ತಮ ಆಹಾರ ಸವಿಯಬೇಕು ಎನ್ನುವ ಬಯಕೆ. ಅಂತೆಯೇ ಬಗೆಬಗೆಯ ರುಚಿಕರ ತಿನಿಸುಗಳನ್ನು ಮಾಡಿ ಸೇವಿಸುತ್ತೇವೆ. ಎಲ್ಲದಕ್ಕೂ ದಿನಾಚರಣೆ ಇರುವ ಹಾಗೇ ಇಂದು ಅಡುಗೆ ದಿನಾಚರಣೆ ಆಚರಣೆ ಮಾಡಲಾಗುತ್ತದೆ.

ಕೆಲವು ದೇಶಗಳಲ್ಲಿ ಈ ದಿನವನ್ನು ಅಡುಗೆ ಮನೆಯಲ್ಲಿ ಹಲವು ವಿಧದ ತಿಂಡಿಗಳನ್ನು ಮಾಡಿ ಆಚರಣೆ ಮಾಡುತ್ತಾರೆ. ಅಲ್ಲಿಯೇ ತಡರಾತ್ರಿಯವರೆಗೂ ಕಾಲ ಕಳೆದು ಹೊಸ ರುಚಿಯ ಪ್ರಯೋಗವನ್ನು ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News